Latest

ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದಸರಾ ಹಬ್ಬ ಸಮೀಪಿಸುತ್ತಿರುವ ಹೊತ್ತಲ್ಲೇ ಆಭರಣಪ್ರಿಯರಿಗೆ ಕೊಂಚ ನಿರಾಸೆಯಾಗಿದೆ. ಚಿನ್ನ-ಬೆಳ್ಳಿ ದರದಲ್ಲಿ ಕೊಂಚ ಏರಿಕೆ ಕಂಡಿದೆ.

ಕಳೆದ ಕೆಲ ದಿನಗಳಿಂದ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಇಂದೂ ಕೂಡ ದರ ಏರಿಕೆ ಮುಂದುವರೆದಿದೆ. ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 43,510 ರೂಪಾಯಿ ಆಗಿದೆ. 100 ಗ್ರಾಂ ಚಿನ್ನಕ್ಕೆ 3,35,100 ರೂ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು ನೂರು ರೂ.ನಷ್ಟು ಏರಿಕೆ ಕಂಡಿದೆ.

24 ಕ್ಯಾರೇಟ್ 10 ಗ್ರಾಂ ಚಿನ್ನಕ್ಕೆ 47,470 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,74,700 ರೂ ಆಗಿದೆ. ಬೆಳ್ಳಿದರದಲ್ಲಿ ಇಂದು ಯಾವುದೇ ಏರಿಳಿತ ಕಂಡುಬಂದಿಲ್ಲ. ಕೆಜಿ ಬೆಳ್ಳಿಗೆ 60,500 ರೂಪಾಯಿ ಇದೆ.

ಚೆನ್ನೈ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,880 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,48,800 ರೂ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನ 47,870 ರೂ ಆಗಿದ್ದು, 100 ಗ್ರಾಂ ಚಿನ್ನ 4,78,700 ರೂ ಆಗಿದೆ.

ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ 45,500 ರೂ ಹಾಗೂ 100 ಗ್ರಾಂ ಗೋಲ್ಡ್ ದರ 4,55,000 ರೂ ಆಗಿದೆ. 24 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 46,500 ರೂ ಆಗಿದ್ದು, 100 ಗ್ರಾಂ ಚಿನ್ನದ ದರ 4,65,000 ರೂ ಆಗಿದೆ.

ಪೊಲೀಸ್ ವಾಹನಕ್ಕೆ ಬೆಂಕಿ; ಲಖಿಂಪುರ ಇನ್ನಷ್ಟು ಉದ್ವಿಗ್ನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button