Kannada NewsKarnataka News

ಶಾಸಕಿ ಲಕ್ಷ್ಮೀ ಹೆಬ್ಬಾಳಕರ  ಸೌಮ್ಯ ಸ್ವಭಾವದ ನಾಯಕಿ : ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು


ಹುಕ್ಕೇರಿ ಹಿರೇಮಠದ ದಸರಾ ನಮ್ಮ ಸಂಸ್ಕೃತಿಯ ಪ್ರತೀಕ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ 

 
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:   ಹುಕ್ಕೇರಿ ಹಿರೇಮಠದ ದಸರಾ ಉತ್ಸವ ಕಾರ್ಯಕ್ರಮ ನಿಮಿತ್ಯ ಮಂಗಳವಾರ ನಡೆದ ಚಂಡಿಕಾ ಯಾಗದಲ್ಲಿ ಬೆಳಗಾವಿ ಗ್ರಾಮೀಣ ಭಾಗದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬಾಗಿಯಾಗಿ ಶ್ರೀ ಸರಸ್ವತಿ ಮಹಾಮಂಡಲಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
 
 ಈ ವೇಳೆ ಮಾತನಾಡಿದ ಹೆಬ್ಬಾಳಕರ್, ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನಮ್ಮ ಪ್ರತಿಯೊಂದು ಕಾರ್ಯಕ್ಕೂ ಸಲಹೆ ನೀಡಿ ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯ ಮಾಡಲು ನನಗೆ ಸ್ಪೂರ್ತಿ ಎಂದರು.
  ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡುತ್ತಾ, ಲಕ್ಷ್ಮೀ ಹೆಬ್ಬಾಳಕರ್ ವರು 7 ವರ್ಷಗಳ ಹಿಂದೆ ಶ್ರೀ ಮಠದ ದಸರಾ ಉತ್ಸವದಲ್ಲಿ ಭಾಗವಹಿಸಿದ್ದರು. ಅವರು ಸೌಮ್ಯ ಸ್ವಭಾವದ ನಾಯಕಿ. ಅವರ ತಾಳ್ಮೆ, ಸಾಮಾಜಿಕ ಕಾರ್ಯ ಅನುಪಮ. ಅವರು ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಮತ್ತು ಬೆಳಗಾವಿ ಗ್ರಾಮೀಣ ಶಾಸಕಿಯಾಗಿ ಜನರ ಕಷ್ಟದಲ್ಲಿ ಭಾಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇನ್ನಷ್ಟು ಅಧಿಕಾರ ಸಿಗಲಿ ಎಂದು ಹಾರೈಸಿದರು.
ನಂತರ ಮಾತನಾಡಿದ ಶಾಸಕಿ  ಲಕ್ಷ್ಮೀ ಹೆಬ್ಬಾಳಕರ ಅವರ ಪುತ್ರ ಮೃಣಾಲ ಹೆಬ್ಬಾಳಕರ, ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಆಶಿರ್ವಾದ ನಮ್ಮ ಮನೆತನದ ಮೇಲೆ ಸದಾ ಇದೆ. ಇವತ್ತು ದಸರಾ ಉತ್ಸವದಲ್ಲಿ ಭಾಗವಹಿಸಿ ಚಂಡಿಕಾ ಯಾಗ , ಸರಸ್ವತಿ ಮಹಾಮಂಡಲ ಪೂಜೆ ಸಲ್ಲಿಸಿ ಶ್ರೀ ಗುರುಶಾಂತೆಶ್ವರ ಆಶಿರ್ವಾದ ಪಡೆದಿದ್ದೇವೆ. ಹುಕ್ಕೇರಿ ಹಿರೇಮಠ ಪ್ರತಿಯೊಂದು ರಂಗದಲ್ಲೂ ಮುಂಚೂಣಿ ಸ್ಥಾನದಲ್ಲಿದೆ. ಶ್ರೀ ಗಳ ಆಶೀರ್ವಾದ ಎಲ್ಲರಿಗೂ ದೊರೆಯಲಿ ಎಂದರು .
ಆಸ್ಥಾನ ವಿದ್ವಾಂಸರಾದ  ಸಂಪತ್ತಕುಮಾರ ಶಾಸ್ತ್ರಿಗಳ ವೈದಿಕತ್ವದಲ್ಲಿ ನೂರಾ ಎಂಟು ವಟುಗಳ ವೇದ ಪಠಣದೊಂದಿಗೆ ಚಂಡಿಕಾ ಯಾಗ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಹುಕ್ಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರೇಖಾ ಚಿಕ್ಕೋಡಿ, ಅಕ್ಷರ ದಾಸೋಹ ಅಧಿಕಾರಿ ಶ್ರಿಶೈಲ ಹಿರೇಮಠ , ಮುರುಗೇಶ ಅಥಣಿ ಸುರೇಶ್ ಜಿನರಾಳಿ ಹಾಗೂ ಚನ್ನಪ್ಪ ಗಜಬರ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button