Latest

ಅಯ್ಯೋ…, ಇಂಥದ್ದನ್ನೆಲ್ಲಾ ಕಲಿಯೋಕೆ ಅಲ್ಲಿ ಹೋಗ್ಬೇಕಾ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆರ್.ಎಸ್.ಎಸ್ ಬಗ್ಗೆ ನಿರಂತರ ವಾಗ್ದಾಳಿ ನಡೆಸುತ್ತಿರುವ ಕುಮಾರಸ್ವಾಮಿಯವರಿಗೆ ಆರ್.ಎಸ್.ಎಸ್ ಶಾಖೆಗೆ ಬರಲಿ ಎಂದು ಬಿಜೆಪಿ ನಾಯಕರು ನೀಡಿರುವ ಆಹ್ವಾನಕ್ಕೆ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೆಟ್ಟ ಸಂಸ್ಕೃತಿ ಕಲಿಯುವ ಅಗತ್ಯ ನನಗಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ’ಅಯ್ಯೋ… ನನಗೆ ಆರ್.ಎಸ್.ಎಸ್ ಶಾಖೆ ಸಹವಾಸವೇ ಬೇಡ’ ಆರ್.ಎಸ್.ಎಸ್ ಶಾಖೆಯಿಂದ ಕಲಿಸಿದ್ದನ್ನು ಎಲ್ಲರೂ ನೋಡಿದ್ದೇವಲ್ಲ…ವಿಧಾನಸಭೆಯಲ್ಲಿ ಹೇಗಿರಬೇಕು? ಎಂಬುದನ್ನು ಕಲಿಸಿದ್ದನ್ನು ಎಲ್ಲರೂ ನೋಡಿಲ್ಲವೇ? ವಿಧಾನಸಭೆ ಕಲಾಪ ನಡೆಯುತಿದ್ದರೆ ನೀಲಿಚಿತ್ರ ನೋಡಿಕೊಂಡು ರೂರುವುದು…ಇಂಥದ್ದನ್ನೆ ತಾನೆ ಅವರ ಶಾಖೆಯಲ್ಲಿ ಕಲಿಸುವುದು? ಇದನ್ನೆಲ್ಲ ಕಲಿತುಕೊಳ್ಳಲು ನಾನು ಅಲ್ಲಿಗೆ ಹೋಗಬೇಕೇ? ಎಂದು ವಾಗ್ದಾಳಿ ನಡೆಸಿದರು.

Home add -Advt

ನಾನು ಆ ಆರ್.ಎಸ್.ಎಸ್ ಶಾಖೆಗೆ ಹೋಗಿ ಏನೂ ಕಲಿತುಕೊಳ್ಳಬೇಕಿಲ್ಲ. ನನಗೆ ಈ ಬಡವರ ಶಾಖೆಯಲ್ಲಿ ಕಲಿತಿರೋದೆ ಸಾಕು… ಅಯ್ಯೋ.. ಆ ಆರ್.ಎಸ್.ಎಸ್ ಶಾಖೆ ಸಹವಾಸ ನನಗೆ ಬೇಡವೇ ಬೇಡ ಎಂದು ಹೇಳಿದರು.
ಮಾಧ್ಯಮದವರು ಕರೆಕ್ಟ್ ಇದ್ರೆ ನಮ್ ಬಾಳ್ ಹಿಂಗ್ಯಾಕ್ ಆಗ್ತಿತ್ತು? – ರಮೇಶ ಜಾರಕಿಹೊಳಿ ಪ್ರಶ್ನೆ

Related Articles

Back to top button