Latest

600 ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಭಕ್ತ; ದೇವರ ದರ್ಶನ ಪಡೆದು ಹೊರ ಬರುತ್ತಿದ್ದಂತೆ ಸಾವು

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಹರಕೆ ತೀರಿಸಲೆಂದು 600 ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆದ ಭಕ್ತನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗೆಮ್ಮ ಕ್ಷೇತ್ರದಲ್ಲಿ ನಡೆದಿದೆ.

60 ವರ್ಷದ ಹುಚ್ಚಪ್ಪ ಮೃತ ವ್ಯಕ್ತಿ. ದಾವಣಗೆರೆ ಮೂಲದ ಹುಚ್ಚಪ್ಪ ಪತ್ನಿ ಸಮೇತ ಉಚ್ಚಂಗೆಮ್ಮ ದೇವಾಲಯಕ್ಕೆ ಬಂದಿದ್ದರು. ಹರಕೆ ತೀರಿಸಲು 600 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆದಿದ್ದಾರೆ. ದರ್ಶನ ಪಡೆದು ದೇವಾಲಯದಿಂದ ಹೊರ ಬರುತ್ತಿದ್ದಂತೆಯೇ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದಾರೆ.

Home add -Advt

ಹುಚ್ಚಪ್ಪ ಅವರಿಗೆ ಎದೆ ನೋವು ಕಾಣಿಸುತ್ತಿದ್ದಂತೆ ತಕ್ಷಣ ಅವರನ್ನು ಡೋಲಿಯಲ್ಲಿ ಕೆಳಗೆ ಕರೆತಂದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Related Articles

Back to top button