Latest

ತಂದೆಯನ್ನೇ ಹತ್ಯೆಗೈದ ಮಗ; ಕಾರಣವೇನು?

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮಗನೇ ತಂದೆ ಹಾಗೂ ತಂದೆಯ ಪ್ರಿಯತಮೆಯನ್ನು ಹತ್ಯೆಗೈದಿರುವ ಘಟನೆ ಮೈಸೂರಿನ ಹೊರವಲಯದ ಶ್ರೀನಗರದಲ್ಲಿ ನಡೆದಿದೆ.

ಶಿವಪ್ರಕಾಶ್ (56) ಹಾಗೂ ಲತಾ (48) ಹತ್ಯೆಯಾದ ದುರ್ದೈವಿಗಳು. ತಂದೆ ಶಿವಪ್ರಕಾಶ್ ಹಾಗೂ ಅವರ ಪ್ರಿಯತಮೆ ಎನ್ನಲಾದ ಮಹಿಳೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಪುತ್ರ ಸಾಗರ್, ಕೃತ್ಯದ ಬಳಿಕ ಪರಾರಿಯಾಗಿದ್ದಾನೆ.

Home add -Advt

ಲತಾ ಅವರ ಮನೆಗೆ ನುಗ್ಗಿದ ಸಾಗರ್ ತನ್ನ ತಂದೆ ಹಾಗೂ ಲತಾ ಇಬ್ಬರನ್ನು ಹತ್ಯೆಗೈದಿದ್ದಾನೆ. ತಡೆಯಲು ಮುಂದಾದ ಲತಾ ಅವರ ಮಗನ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಾಯಾಳು ನಾಗಾರ್ಜುನನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾಗರ್ ಬಂಧನಕ್ಕಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

Related Articles

Back to top button