ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಹೆಮ್ಮಡಗಾ ಗ್ರಾಮದ ಬಳಿಯ ಭೀಮಗಡ ಅರಣ್ಯಕ್ಕೆ ಮೇಯಲು ತೆರಳಿದ್ದ ಆಕಳ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಸೋಮವಾರ ಸಂಭವಿಸಿದ್ದು, ಮಂಗಳವಾರ ಬೆಳಕಿಗೆ ಬಂದಿದೆ.
ಹೆಮ್ಮಡಗಾ ಗ್ರಾಮದ ರೈತ ಪೂನಪ್ಪ ಗಾವಡಾ ಅವರಿಗೆ ಸೇರಿದ್ದ ಆಕಳು ಹುಲಿಯ ದಾಳಿಗೆ ಬಲಿಯಾಗಿದ್ದು, ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸ್ಥಳೀಯರು ವಿಷಯವನ್ನು ಭೀಮಗಡ ವಲಯದ ಅರಣ್ಯ ಇಲಾಖೆಯವರಿಗೆ ಮಂಗಳವಾರ ಮುಂಜಾನೆಯೇ ಮುಟ್ಟಿಸಿದ್ದು, ಸಂಜೆಯವರೆಗೂ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಕೂಡಲೇ ಅರಣ್ಯ ಇಲಾಖೆಯವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ನೊಂದ ರೈತನಿಗೆ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಒಂದೇ ಕುಟುಂಬದ ಐವರು ಆತ್ಮಹತ್ಯೆ; ಮಹಿಳೆ ಬರೆದ ಡೆತ್ ನೋಟ್ ಪತ್ತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ