Kannada NewsKarnataka News

ಬೆಳಗಾವಿ: ತಾನು ಜೀವತೆತ್ತು ಭಾರೀ ಅನಾಹುತ ತಪ್ಪಿಸಿದ ನಾಯಿ; ಶುಕ್ರವಾರ ರಾತ್ರಿ ಕರುಣಾಜನಕ ಘಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಬೆಳಗಾವಿಯ ಶಿವಬಸವನಗರದ ಹೆಸ್ಕಾಮ್ ಕಲ್ಯಾಣ ಮಂಟಪದ
    ಎದುರು ರಸ್ತೆ ಬದಿಗೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಜರ್ಮನ್ ಶೆಫರ್ಡ ಶ್ವಾನ ಪ್ರಾಣ ಬಿಟ್ಟಿದೆ.
ತನ್ಮೂಲಕ, ನಾಯಿಯೊಂದು ತನ್ನ ಪ್ರಾಣ ತೆತ್ತು ಸಂಭವಿಸಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದೆ.
  ಶುಕ್ರವಾರ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದೆ. ಶಿವಬಸವ ನಗರದ ಹೆಸ್ಕಾಮ್ ಕಲ್ಯಾಣ
ಮಂಟಪವಿರುವ ಮುಖ್ಯ ರಸ್ತೆಯ ಬದಿಯ ಫುಟ್ ಪಾಥ್ ಮೇಲೆ ಜೀವಂತ ತಂತಿ ಬಿದ್ದಿತ್ತು. ಡಾ.ರಾಜು ನಾಯಕ ಅವರ ಜೆರ್ಮನ್ ಶೆಫರ್ಡ ಶ್ವಾನ ಮ್ಯಾಕ್ಸ್ ಅಲ್ಲಿ ಮೂತ್ರ ವಿಸರ್ಜನೆಗೆ ಹೋಗಿತ್ತು.
ದೂರದಲ್ಲಿ ಡಾ.ನಾಯಕ ಅವರು ಮನೆ ಎದುರು ನಿಂತಿದ್ದರು. ನಾಯಿ ಒಮ್ಮೆಲೇ ವಿದ್ಯುತ್ ಸ್ಪರ್ಷದಿಂದ ಕ್ಷಣಾರ್ಧದಲ್ಲಿ ಸತ್ತೇ ಹೋಯಿತು.
 ಇದರಿಂದ ಗಾಬರಿಗೊಂಡ ನಾಯಕ ಅವರು ಹೆಸ್ಕಾಮ್ ಸಿಬ್ಬಂದಿಗೆ ಮತ್ತು ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ಫೋನ್ ಮಾಡಿ ತಿಳಿಸಿದರು. ಹೆಸ್ಕಾಮ್ ಸಿಬ್ಬಂದಿ ಧಾವಿಸಿ ಬಂದು ವಿದ್ಯುತ್ ಸಂಪರ್ಕವನ್ನು ರಾತ್ರಿ 11.45 ಕ್ಕೆ ಕಡಿತಗೊಳಿಸಿದರು.
 ಈ ರಸ್ತೆಯಲ್ಲಿ ಬೆಳಿಗ್ಯೆ 5 ಗಂಟೆಗೆ ಸುತ್ತಲಿನ ಜನರು ವಾಕ್ ಮಾಡುತ್ತಾರೆ. ಡಾ.ನಾಯಕ ಅವರು
ಎಚ್ಚರಿಸದಿದ್ದರೆ ಶನಿವಾರ ಬೆಳಗಿನ ಜಾವ ಎಂಥ ದುರ್ಘಟನೆಯಾದರೂ
ಸಂಭವಿಸುವ ಸಾಧ್ಯತೆಯಿತ್ತು ಎಂದು ಅಶೋಕ ಚಂದರಗಿ ತಿಳಿಸಿದ್ದಾರೆ. ಆ ನಾಯಿ ತನ್ನ ಪ್ರಾಣ ತೆತ್ತು, ಸಂಭವಿಸಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದೆ.
ಡಾ.ನಾಯಕ್ ಅವರು 11 ತಿಂಗಳ ತಮ್ಮ ಶ್ವಾನವನ್ನು ಕಳೆದುಕೊಂಡಿದ್ದಾರೆ. ಈ ವಿದ್ಯುತ್ ಕಂಬಗಳನ್ನು ಬಹುಶಃ ಸ್ಮಾರ್ಟ ಸಿಟಿಯವರೇ ಹಾಕುತ್ತಿರಬೇಕು ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button