ಪ್ರಗತಿವಾಹಿನಿ ಸುದ್ದಿ, ಹೈದರಾಬಾದ್
ಈ ಬಾರಿಯ ತೆಲಂಗಾಣ ರಾಜ್ಯದ ನಿಜಾಮಾಬಾದ್ ಕ್ಷೇತ್ರದ ಲೋಕಸಭಾ ಚುನಾವಣೆ ಆಯೋಗಕ್ಕೆ ದೊಡ್ಡ ಸವಾಲಾಗಿದೆ.
ಇಲ್ಲಿ ಒಟ್ಟೂ 185 ಅಭ್ಯರ್ಥಿಗಳು ಕಣದಲ್ಲಿದ್ದು, ಸಾಮಾನ್ಯ ಕ್ಷೇತ್ರದ 10-12 ಪಟ್ಟು ಸಿದ್ದತೆಗಳಾಗಬೇಕಿದೆ.
ನಿಜಾಮಾಬಾದ್ ನ ಎಲ್ಲ ಮತಗಟ್ಟೆಗಳಿಗೂ ತಲಾ 12 ಮತಯಂತ್ರಗಳನ್ನು ರವಾನಿಸಬೇಕಾಗುತ್ತದೆ. ಈ ಕ್ಷೇತ್ರದಲ್ಲಿ ಸುಮಾರು 600 ಎಂಜಿನಿಯರ್ ಗಳನ್ನು ನಿಯೋಜಿಸಲಾಗಿದೆ.
ಚುನಾವಣೆ ವೆಚ್ಚ ಕೂಡ ಬೇರೆ ಕ್ಷೇತ್ರ ಗಳಿಗಿಂತ ಮೂರುಪಟ್ಟು ಅಧಿಕ ವಾಗಲಿದೆ. ಮತದಾನವೂ ವಿಳಂಬವಾಗುವ ಆತಂಕವಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ