Latest

ಫೋಟೋಶೂಟ್ ವೇಳೆ ಖಾಸಗಿ ಅಂಗ ಪ್ರದರ್ಶನ; ಮುಜುಗರಕ್ಕೀಡಾದ ನಟಿ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಸೆಲೆಬ್ರಿಟಿಗಳ ಫೋಟೋ ಶೂಟ್ ವೇಳೆ ಆಗುವಂತಹ ಎಡವಟ್ಟಿನಿಂದಾಗಿ ನಟ-ನಟಿಯರು ಮುಜುಗರಕ್ಕೀಡಾಗಿ ಏನೆಲ್ಲ ಅವಮಾನಗಳನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ನಡೆದ ಈ ಘಟನೆ ಸಾಕ್ಷಿಯಾಗಿದೆ.

ಫೋಟೋ ಶೂಟ್ ವೇಳೆ ನಟಿಯರು ತೊಡುವ ಬಟ್ಟೆಗಳೇ ಹಲವು ಬಾರಿ ಅವರಿಗೆ ಮುಳುವಾಗುತ್ತದೆ. ಬಾಲಿವುಡ್ ನಟಿ ಪಾಯಲ್ ರಜಪೂತ್ ಇಂತದ್ದೇ ಸಂದರ್ಭವನ್ನು ಎದುರಿಸಿದ್ದು, ಅವರ ತಾಯಿ, ಮಗಳಿಗೆ ಚಿತ್ರರಂಗವನ್ನೇ ತೊರೆಯುವಂತೆ ತಾಕೀತು ಮಾಡಿದ್ದಾರಂತೆ.

ಯಲ್ಲೋ ಕಲರ್ ಕೋಟ್ ರೀತಿಯ ಬಟ್ಟೆ ಧರಿಸಿ ಫೋಟೋಗೋ ಪೋಸ್ ನೀಡುತ್ತಿದ್ದ ವೇಳೆ ಖಾಸಗಿ ಅಂಗ ಪ್ರದರ್ಶನವಾಗಿ ಪಾಯಲ್ ಮುಜುಗರಕ್ಕೀಡಾದ ಘಟನೆ ನಡೆದಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಗಳನ್ನು ಟ್ರೋಲ್ ಮಾಡುವ ರೀತಿ ಕಂಡು ಬೇಸರ ವ್ಯಕ್ತಪಡಿಸಿದ ಪಾಯಲ್ ತಾಯಿ ಮಗಳಿಗೆ ಬುದ್ಧಿವಾದ ಹೇಳಿ ಚಿತ್ರರಂಗ ಬಿಡುವಂತೆ ಸೂಚಿಸಿದ್ದರಂತೆ. ಬಳಿಕ ತಾಯಿಯನ್ನು ಸಮಾಧಾನಪಡಿಸಿದ ಪಾಯಲ್ ಚಿತ್ರರಂಗದಲ್ಲಿ ಇಂತಹ ಅವಮಾನಗಳು ಸಾಮಾನ್ಯ, ಎಲ್ಲವನ್ನು ಎದುರಿಸಬೇಕು ಎಂದು ಹೇಳಿ ಒಪ್ಪಿಸಿದ್ದರಂತೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ವತ: ಪಾಯಲ್ ರಜಪೂತ್ ಹೇಳಿಕೊಂಡಿದ್ದಾರೆ.
ಒಮಿಕ್ರಾನ್ ನಿಯಂತ್ರಣಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ ರಾಜ್ಯ ಸರ್ಕಾರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button