ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, ಇಂದು ಒಂದೇ ದಿನದಲ್ಲಿ 12,000 ಜನರಲ್ಲಿ ಸೋಂಕು ಪತ್ತೆಯಾಗಿದೆ ನಾಲ್ವರು ಮಹಾಮಾರಿಗೆ ಬಲಿಯಾಗಿದ್ದಾರೆ.
ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 12,000 ಜನರಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿಯೇ ಹೊಸದಾಗಿ 9020 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಒಂದೇ ದಿನದಲ್ಲಿ ಕೋವಿಡ್ ಗೆ ರಾಜ್ಯದಲ್ಲಿ ನಾಲ್ವರು ಬಲಿಯಾಗಿದ್ದು, ಬೆಂಗಳೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಶೇ.6.33ಕ್ಕೆ ಏರಿಕೆಯಾಗಿದೆ ಎಂದು ಟ್ವಿಟರ್ ನಲ್ಲಿ ಹೇಳಿದ್ದಾರೆ.
ಬೆಳಗಾವಿಯಲ್ಲಿ 105 ಜನರಿಗೆ ಭಾನುವಾರ ಸೋಂಕು ಪತ್ತೆಯಾಗಿದೆ.
ಜಿಲ್ಲಾವಾರು ಸೋಂಕಿತರ ಸಂಖ್ಯೆ:
ಬಾಗಲಕೋಟೆ 10
ಬಳ್ಳಾರಿ 107
ಬೆಳಗಾವಿ 105
ಬೆಂಗಳೂರು ಗ್ರಾಮಾಂತರ 98
ಬೆಂಗಳೂರು ನಗರ 9,020
ಬೀದರ್ 20
ಚಾಮರಾಜನಗರ 26
ಚಿಕ್ಕಬಳ್ಳಾಪುರ 44
ಚಿಕ್ಕಮಗಳೂರು 78
ಚಿತ್ರದುರ್ಗ 24
ದಕ್ಷಿಣಕನ್ನಡ 298
ದಾವಣಗೆರೆ 30
ಧಾರವಾಡ 147
ಗದಗ 07
ಹಾಸನ 182
ಹಾವೇರಿ 08
ಕಲಬುರಗಿ 98
ಕೊಡಗು 29
ಕೋಲಾರ 83
ಕೊಪ್ಪಳ 19
ಮಂಡ್ಯ 261
ಮೈಸೂರು 398
ರಾಯಚೂರು 07
ರಾಮನಗರ 20
ಶಿವಮೊಗ್ಗ 198
ತುಮಕೂರು 190
ಉಡುಪಿ 340
ಉತ್ತರಕನ್ನಡ 94
ವಿಜಯಪುರ 49
ಯಾದಗಿರಿ 10
ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 30,51,958 ಕ್ಕೆ ಏರಿಕೆಯಾಗಿದೆ. ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 901. ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,63,957.
ಕರ್ನಾಟಕದಲ್ಲಿ ಕೋವಿಡ್ಸಕ್ರಿಯ ಪ್ರಕರಣಗಳ ಸಂಖ್ಯೆ 49,602ಕ್ಕೆ ಏರಿಕೆಯಾಗಿದೆ.
ಪಾದಯಾತ್ರೆ ಅರ್ಧಕ್ಕೆ ಬಿಟ್ಟ ಸಿದ್ದರಾಮಯ್ಯ; ಚಿಕಿತ್ಸೆಗಾಗಿ ಬೆಂಗಳೂರಿಗೆ ವಾಪಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ