Kannada NewsKarnataka News
ಗ್ರಾಮೀಣ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧೆಡೆ ಶುಕ್ರವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಲಕ್ಷಾಂತ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ನೆರವೇರಿಸಿದರು.
ಮಾಸ್ತಮರ್ಡಿ ಗ್ರಾಮದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅನುದಾನದಲ್ಲಿ 9.40 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯ ಕಾಮಗಾರಿಗಳಿಗೆ ಹಾಗೂ ಬಸವೇಶ್ವರ ದೇವಸ್ಥಾನದ ಆವರಣಕ್ಕೆ ಫೇವರ್ಸ್ ಅಳವಡಿಕೆಯ ಕಾಮಗಾರಿಗೆ ಭೂಮಿ ಪೂಜೆಯನ್ನು ಹೆಬ್ಬಾಳಕರ್ ನೆರವೇರಿಸಿದರು.
ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ತೆರಳಿ ಮಕ್ಕಳ ಆರೋಗ್ಯ ಹಾಗೂ ವಿದ್ಯಾಬ್ಯಾಸದ ಕುರಿತು ಸುಧೀರ್ಘವಾಗಿ ಚರ್ಚಿಸಿ, ಶಾಲಾ ಆವರಣದಲ್ಲಿ ಫೇವರ್ಸ್ ಅಳವಡಿಕೆ ಕಾರ್ಯಕ್ರಮಕ್ಕೂ ಸಹ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯಲ್ಲಪ್ಪ ತೋರ್ಲಿ, ಅಶೋಕ ತೋರ್ಲಿ, ಪ್ರಕಾಶ ಪಾಟೀಲ, ಶ್ರೀಶೈಲ್ ಪಾಟೀಲ, ಎಲ್ ಜಿ ಪಾಟೀಲ, ವೈ ಕೆ ಪರಂಡೆ, ಪರುಶರಾಮ ಕುರಂಜಿ, ಬಾಳು ಕುರಂಜಿ, ಬಸವರಾಜ ತೋರ್ಲಿ, ಬಸವರಾಜ ಕೋಲಕಾರ, ಸಂತೋಷ ಮಡ್ಡೆಪ್ಪಗೋಳ, ಮಾರುತಿ, ಚಂದ್ರು ಜಂಗಲಿ, ವಿಜಯ ಬಿ ಪಾಟೀಲ, ಮಹಾನಂದಾ ಮರಕಟ್ಟಿ, ಸುನಿತಾ ಪಾರಿಶ್ವಾಡ್, ರಾಮಾ ಮಿರಜಿ, ದಿಲೀಪ್, ಸುರೇಶ ಪಾಟೀಲ, ರಾಘವೇಂದ್ರ ಮಾವಿನಕಟ್ಟಿ, ಬಾಳು ಪಾಟೀಲ, ವಿಶ್ವನಾಥ್, ನಾಗನಗೌಡ ಪಾಟೀಲ, ಲಕ್ಷ್ಮೀ ಚೌಗುಲೆ, ಕಾಮಗಾರಿಗಳ ಗುತ್ತಿಗೆದಾರರಾದ ಬಾಲಾಜಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ತಾರಿಹಾಳದಲ್ಲಿ ಹಲವು ಯೋಜನೆ
ಕ್ಷೇತ್ರದ ತಾರಿಹಾಳ ಗ್ರಾಮದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಡಾ. ಬಾಬು ಜಗಜೀವನರಾಮ್ ಭವನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಬೂಜೆ ನೆರವೇರಿಸಿದರು. ಸಮಾಜ ಕಲ್ಯಾಣ ಇಲಾಖೆಯ ಅನುದಾನದಡಿ ಒಟ್ಟು 10 ಲಕ್ಷ ರೂ,ಗಳ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ.
ತಾರಿಹಾಳ ಗ್ರಾಮದ ಒಳಾಂಗಣ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಸಹ ಚಾಲನೆ ನೀಡಲಾಯಿತು. ಪಂಚಾಯತ್ ರಾಜ್ ಇಂಜಿನೀಯರಿಂಗ್ ಇಲಾಖೆಯ ಅನುದಾನದಲ್ಲಿ ಒಟ್ಟು 26.50 ಲಕ್ಷ ರೂ,ಗಳ ವೆಚ್ಚದಲ್ಲಿ ರಸ್ತೆಯ ಡಾಂಬರೀಕರಣದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡಿರುವ ಮೂರು ಹೆಚ್ಚುವರಿ ಕೊಠಡಿಗಳನ್ನು ಸಹ ಹೆಬ್ಬಾಳಕರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಸುರಜ ಜಾಧವ್, ಯಲ್ಲಪ್ಪ ಗುಂಡದಡ್ಕರ್, ನಾಮದೇವ ಜೋಗಣ್ಣವರ, ಬಸವರಾಜ ತಳವಾರ, ಲಕ್ಷ್ಮಣ ಮುಚ್ಚಂಡಿ, ಈರಪ್ಪ, ಭುಮಣ್ಣವರ, ಬಸವರಾಜ ವಾನಿ, ಯಲ್ಲೇಶಿ ಜೋಗಣ್ಣವರ, ಪ್ರಮೋದ್ ಜಾಧವ್, ಗಂಗವ್ವ ಪೂಜಾರ, ಗೀತಾ ತಳವಾರ, ಸವಿತಾ ಕೋಲಕಾರ, ಪಿಡಿಓ ವಿಜಯಲಕ್ಷ್ಮಿ ತೆಗ್ಗಿ ಕಾಶೀನಾಥ್ ಕೋಲಕಾರ, ರಮೇಶ ಜಳಕಣ್ಣವರ, ಎ ಆರ್ ಪಾಟೀಲ, ಕಿರಣ ಪಾಟೀಲ, ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ