Kannada NewsKarnataka News
ಸುಳೇಬಾವಿ ಲಕ್ಷ್ಮಿ ದೇವಿಗೆ ಕುಟುಂಬ ಸಮೇತ ಉಡಿ ತುಂಬಿದ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಗ್ರಾಮದ ಆದಿಶಕ್ತಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕುಟುಂಬ ಸಮೇತ ತೆರಳಿ ದೇವಿಗೆ ಉಡಿ ತುಂಬಿದರು.
ತಾಯಿ ಗಿರಿಜಾ ಹಟ್ಟಿಹೊಳಿ, ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಪುತ್ರ ಮೃಣಾಲ ಹೆಬ್ಬಾಳಕರ್, ಸೊಸೆ ನಂದಿನಿ ಜೊತೆ ತೆರಳಿ ಶ್ರೀ ಮಹಾಲಕ್ಷ್ಮಿ ದೇವಿಗೆ ಉಡಿ ತುಂಬಿದರು.
ದೇವಸ್ಥಾನದ ಕಮೀಟಿಯವರು ಹೆಬ್ಬಾಳಕರ್ ಕುಟುಂಬವನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಹಾಲಕ್ಷ್ಮಿ ದೇವಿಯ ಅನುಗ್ರಹ ಕ್ಷೇತ್ರದ ಜನರ ಮೇಲಿರಲಿ ಹಾಗೂ ನಾಡಿನ ಜನರಿಗೆಲ್ಲ ಒಳಿತಿಗಾಗಿ ಎಂದು ಪ್ರಾರ್ಥಿಸಿದೆ ಎಂದು ಹೆಬ್ಬಾಳಕರ್ ತಿಳಿಸಿದರು.




