ಲಂಡನ್ – ವಿಮಾನ ಪ್ರಯಾಣ ಅತಿ ದುಬಾರಿ, ವಿನಮಾನಕ್ಕೆ ಬಳಸುವ ಇಂಧನದ ವೆಚ್ಚವೂ ಹೆಚ್ಚು ಅಲ್ಲದೆ ಪೈಲಟ್‌ಗಳು ಇತರ ಸಿಬ್ಬಂದಿಗೆ ನೀಡುವ ಸಂಬಳ ಸಾರಿಗೆ ಸರಿದೂಗಿಸಲು ಟಿಕೆಟ್ ದರ ಸಹಜವಾಗಿಯೇ ಹೆಚ್ಚಿರುತ್ತದೆ. ಹಾಗಾಗಿ ಬಹತೇಕ ವಿಮಾನಯಾನ ಸಂಸ್ಥೆಗಳು ಊರಿಂದೂರಿಗೆ ಸಂಚರಿಸುವ ವಿಮಾನ ಪ್ರಯಾಣವನ್ನು ವಾರದಲ್ಲಿ ಒಂದೋ ಎರಡೋ ಬಾರಿ ನಿಗದಿಪಡಿಸುವುದೂ ಇದೆ.
ಆದರೆ ಈ ಎಲ್ಲ ಲಾಭ, ನಷ್ಟದ ಲೆಕ್ಕಾಚಾರಗಳನ್ನು ಹೊರತುಪಡಿಸಿ ಕೇವಲ ಒಂದೇ ಪ್ರಯಾಣಿಕನಿದ್ದರೂ ೯೦೦ ಕಿಮೀ ವಿಮಾನ ಸಂಚಾರ ನಡೆಸಲಾಗಿದೆ ಎಂದರೆ ಅಚ್ಚರಿಯೆನಿಸದೇ ಇರದು.
ಈ ಘಟನೆ ನಡೆದಿರುವುದು ಇಂಗ್ಲೆಂಡ್‌ನಲ್ಲಿ. ಇಂಗ್ಲೆಂಡಿನಿಂದ ಸೆಂಟ್ರಲ್ ಫ್ಲೋರಿಡಾಗೆ ಹೊರಟಿದ್ದ ವಿಮಾನದಲ್ಲಿ ಕೇವಲ ಒಬ್ಬನೇ ವಿದ್ಯಾರ್ಥಿ ಪ್ರಯಾಣಿಸಿದ್ದಾನೆ. ತಾನೊಬ್ಬನೇ ಇದ್ದರೂ ವಿಮಾನ ಸಂಚಾರ ಕೈಗೊಂಡಿದ್ದು ಯಾಕೆ ಎಂಬುದು ಆತನಿಗೂ ತಿಳಿದಿಲ್ಲವಂತೆ.
ಮೆಚ್ಚುಗೆ ಪಡೆದ ಬ್ರಿಟಿಷ್ ಏರ್‌ವೇಸ್
ಕೈ ಫೋರ್ಸಿತ್ ಎಂಬ ೧೯ ವರ್ಷದ ವಿದ್ಯಾರ್ಥಿ ಈ ಅದೃಷ್ಟಶಾಲಿ ಪ್ರಯಾಣಿಕ. ಈತನನ್ನು ಹೊತ್ತು ಸಾಗಿದ್ದು ಬ್ರಿಟಿಷ್ ಏರ್‌ವೇಸ್‌ನ ವಿಮಾನ. ಕಾಲೇಜಿಗೆ ರಜೆ ಇದ್ದ ಕಾರಣ ತನ್ನ ಊರಿಗೆ ಹೊರಟಿದ್ದ ಈತ ಜನೇವರಿ ೯ರಂದು ಇಂಗ್ಲೆಂಡಿನಿಂದ ಸೆಂಟ್ರಲ್ ಫ್ಲೋರಿಡಾಗೆ ಹೊರಡುವ ವಿಮಾನಕ್ಕೆ ಟಿಕೇಟ್ ಬುಕ್ ಮಾಡಿಸಿದ್ದ. ನಿಗದಿತ ವೇಳೆಗೆ ಬಂದು ವಿಮಾನವೇರಿ ಕುಳಿತ. ಸ್ವಲ್ಪ ಸಮಯದ ಬಳಿಕ ವಿಮಾನ ಟೇಕ್ ಆಫ್ ಆಗಿದೆ. ಬೇರೆ ಯಾರೂ ಪ್ರಯಾಣಿಕರಿಲ್ಲದ ಕಾರಣ ವಿದ್ಯಾರ್ಥಿ ಆರಂಭದಲ್ಲಿ ಕೊಂಚ ಗಾಭರಿಗೊಂಡಿದ್ದನಂತೆ.
ವಿಮಾನದಲ್ಲಿ ನಾನೊಬ್ಬನೇ ಏಕಿದ್ದೇನೆ, ಏನು ನಡೆಯುತ್ತಿದೆ ಎಂಬುದು ನನಗೆ ತಿಳಿಯುತ್ತಿರಲಿಲ್ಲ, ಇಡೀ ವಿಮಾನದಲ್ಲಿ ನಾನೊಬ್ಬನೇ ಇದ್ದೆ, ಫ್ಲೈಟ್ ಅಟೆಂಡೆಂಟ್ ಸ್ವಲ್ಪ ಸಮಯದ ಬಳಿಕ ಬಗೆಬಗೆಯ ಆಹಾರ, ತಿಂಡಿ-ತಿನಿಸುಗಳು, ಅನಿಯಮಿತ ಪಾನೀಯಗಳನ್ನು ನನಗೆ ನೀಡಿದರು ಎಂದು ವಿದ್ಯಾರ್ಥಿ ಪೋರ್ಸಿತ್ ಹೇಳಿಕೊಂಡಿದ್ದಾರೆ.
ನಾನೊಬ್ಬನೇ ಇದ್ದ ಕಾರಣ ಎಲ್ಲಿ ಬೇಕಾದರೂ ಕುಳಿತುಕೊಳ್ಳಲು ಅನುಮತಿ ನೀಡಲಾಗಿತ್ತು. ಆದರೆ ನಾನೊಬ್ಬನೇ ಯಾಕಿದ್ದೆ ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಯಾರೂ ಕೂಡ ವಿಮಾನದಲ್ಲಿ ತೆರಳಲು ಮುಂದೆ ಬರುತ್ತಿಲ್ಲವೋ, ಅಥವಾ ಅಂದು ಮಾತ್ರ ನಾನೊಬ್ಬನೇ ಇದ್ದೆನೋ ತಿಳಿದಿಲ್ಲ ಎಂದಿದ್ದಾರೆ. ಯಾವ ಆಸನದಲ್ಲಿ ಬೇಕಾದರೂ ಕುಳಿತುಕೊಳ್ಳಬಹುದು ಎಂದು ವಿಮಾನ ಸಿಬ್ಬಂದಿ ತಿಳಿಸಿದ್ದರು. ಆದರೆ ಅದನ್ನು ಮಾಡುವುದು ನಿಯಮಗಳಿಗೆ ವಿರುದ್ಧವೆನಿಸಿ ನಾನು ನನ್ನ ಸೀಟಿನಲ್ಲೇ ಕುಳಿತುಕೊಂಡೆ ಎಂದಿದ್ದಾರೆ. ಒಂದೇ ಪ್ರಯಾಣಿಕನಿದ್ದಿದ್ದು ತಿಳಿದರೂ ಸಂಚಾರ ಕೈಗೊಂಡು ಸೇವೆ ನೀಡಿದ ಬ್ರಿಟಿಷ್ ಏರ್‌ವೇಸ್ ಮೆಚ್ಚುಗೆಗೆ ಪಾತ್ರವಾಗಿದೆ.
28 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ