Kannada News

ಬೆಳಗಾವಿಯಲ್ಲಿ ಮತ್ತೆ ಮೂವರ ಬಲಿ, ನಿಲ್ಲದ ಕೊರೋನಾ ಓಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಶನಿವಾರ 798 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಮೂವರು ಸಾವಿಗೀಡಾಗಿದ್ದಾರೆ.

ಬೆಳಗಾವಿ ತಾಲೂಕನಲ್ಲಿ 338, ಸವದತ್ತಿಯಲ್ಲಿ 99, ಚಿಕ್ಕೋಡಿಯಲ್ಲ 79, ರಾಯಬಾಗದಲ್ಲಿ 57, ಖಾನಾಪುರದಲ್ಲಿ 38, ಗೋಕಾಕಲ್ಲಿ 34,ಬೈಲಹೊಂಗಲದಲ್ಲಿ 37, ಅಥಣಿಯಲ್ಲಿ 24, ಹುಕ್ಕೇರಿಯಲ್ಲಿ 31, ರಾಮದುರ್ಗದಲ್ಲಿ 27 ಹಾಗೂ ಇತರೆ 34 ಜನರಿಗೆ ಸೋಂಕು ದೃಢಪಟ್ಟಿದೆ.

Home add -Advt

ಚಿಕ್ಕೋಡಿಯಲ್ಲಿ ಇಬ್ಬರು ಹಾಗೂ ಸವದತ್ತಿಯಲ್ಲಿ ಓರ್ವರು ಸಾವಿಗೀಡಾಗಿದ್ದಾರೆ. ಚಿಕ್ಕೋಡಿಯಲ್ಲಿ 36 ವರ್ಷದ ಯುವಕ ಮನೆಯಲ್ಲೇ ಸಾವಿಗೀಡಾಗಿದ್ದಾರೆ.

ಚಿಕ್ಕೋಡಿಯಲ್ಲಿ ಇನ್ನೋರ್ವ 58 ವರ್ಷದ ವ್ಯಕ್ತಿ ಹಾಗೂ ಸವದತ್ತಿಯಲ್ಲಿ 60 ವರ್ಷದ ವ್ಯಕ್ತಿ ಸರಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಜಿಲ್ಲೆಯಲ್ಲಿ ಇನ್ನೂ 3748 ಜನರ ವರದಿ ಬರಬೇಕಿದೆ. 5928 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜ.31ರಿಂದ ರಾತ್ರಿ ಕರ್ಫ್ಯೂ ತೆರವು; ಹಲವು ಮಾರ್ಗಸೂಚಿ ಸಡಿಲಿಕೆ

Related Articles

Back to top button