Kannada NewsLatest

ಫೆ.6ಕ್ಕೆ ಗೋಲಿಹಳ್ಳಿ ಗ್ರಾಮದೇವಿ ಮಂದಿರ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಖಾನಾಪುರ ತಾಲೂಕಿನ ಶ್ರೀಕ್ಷೇತ್ರ ಗೋಲಿಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮದೇವಿ ಮಂದಿರದ ವಾಸ್ತುಶಾಂತಿ ಹಾಗೂ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮವನ್ನು ರವಿವಾರ ದಿ. 6 ರಂದು ನಡೆಯಲಿದೆ.

ರವಿವಾರ ಬೆಳಿಗ್ಗೆ 8 ಘಂಟೆಗೆ ಶ್ರೀ ರುದ್ರಸ್ವಾಮಿ ಮಠ ಬಿಳಕಿ ‌ಅವರೊಳ್ಳಿ ಚನ್ನಬಸವ ದೇವರು ಇವರ ಅಮೃತ ಹಸ್ತದಿಂದ ನೂತನ ಮೂರ್ತಿ ಪೂಜೆ ನೆರವೇರಲಿದೆ‌.

Home add -Advt

ಖಾನಾಪುರ ಶಾಸಕಿ ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ಕುಂಭಮೇಳಕ್ಕೆ ಚಾಲನೆ ನೀಡಲಿದ್ದಾರೆ. ಫೆ.10 ರಂದು ಶ್ರೀ ಸಿದ್ದ ಶಿವಯೋಗಿ ಶಾಂಡಿಲೇಶ್ವರ ಮಠ ಹಿರೇಮುನವಳ್ಳಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಪ್ರಾಣ ಪ್ರತಿಷ್ಠಾಪನೆ, ಶ್ರೀ ಪಂ.ಬ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಇವರ ನೇತೃತ್ವದಲ್ಲಿ ಕಳಸಾರೋಹಣ ಹಾಗೂ ಸಕಲ ಪೂಜೆ ಕಾರ್ಯಕ್ರಮ ನೆರವೇರಲಿದೆ.

ಮಂದಿರ ಉದ್ಘಾಟನೆಯನ್ನು ನಾಸೀರ ಬಾಗವಾನ ನೆರವೇರಿಸಲಿದ್ದರೆ ವಿಠ್ಠಲ ಹಲಗೇಕರ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಗರ್ಭಗುಡಿ ಉದ್ಘಾಟನೆಯನ್ನು ಅರವಿಂದ್ ಪಾಟೀಲ್ ನೆರವೇರಿಸಲಿದ್ದಾರೆ. ಫೆ.6 ರಿಂದ ಫೆ.11 ವರೆಗೆ ಪುರಾಣ, ಪ್ರವಚನ, ಭಜನಾ ಕಾರ್ಯಕ್ರಮ, ಮಹಾಪ್ರಸಾದ ವಿತರಣೆ ಇನ್ನಿತರ ಕಾರ್ಯಕ್ರಮಗಳು ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಜರುಗಲಿವೆ.
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಜಿಲ್ಲಾ ತಾಲೂಕಾ ಪಧಾಧಿಕಾರಿಗಳ ನೇಮಕ

Related Articles

Back to top button