Latest

ವೈಫ್ ಸ್ವಾಪಿಂಗ್ ; ಸಮಾನ ಮನಸ್ಕರನ್ನು ಆಹ್ವಾನಿಸುತ್ತಿದ್ದ; ಬೆಂಗಳೂರಲ್ಲಿ ವ್ಯಕ್ತಿ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು:   ವೈಫ್ ಸ್ವಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಪತಿಮಹಾಶಯನನ್ನು ಬಂಧಿಸಿದ್ದಾರೆ.

ರಾಷ್ಟ್ರದ ಕೆಲವು ರಾಜ್ಯಗಳಲ್ಲಿ ವೈಫ್ ಸ್ವಾಪಿಂಗ್ ದಂಧೆ ಭಾರಿ ಸದ್ದು ಮಾಡಿತ್ತು. ಇದೀಗ ಬೆಂಗಳೂರಿಗೂ ಕಾಲಿಟ್ಟಿದೆ. ಪತ್ನಿಯನ್ನೇ ಇಂಥ ದಂಧೆಗೆ ನೂಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಮೂಲದ ವಿನಯಕುಮಾರ ಬಂಧಿತ.  ತನ್ನ ಪತ್ನಿಯನ್ನು ಪರಪುರುಷರ ಜತೆ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗುವಂತೆ  ಮಾಡಿದ್ದಲ್ಲದೇ ಇಂಥ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ.  ಈ ರೀತಿಯ ಪ್ಯಾಂಟಸಿ ಸೆಕ್ಸ್ ದಂಧೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಮಾನ ಮನಸ್ಕರನ್ನು ಆಹ್ವಾನಿಸುತ್ತಿದ್ದ.

ವಿಪರ್ಯಾಸವೆಂದರೆ ಪತ್ನಿಯೂ ಆತನ ಈ ಗೀಳಿಗೆ ಸಹಕಾರಿ ನೀಡುತ್ತಿದ್ದಳು.

ವೈಫ್ ಸ್ವಾಪಿಂಗ್ ಬಗ್ಗೆ ಆರೋಪಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದ, ಈ ಬಗ್ಗೆ ಗಮನಿಸಿದ್ದ ವ್ಯಕ್ತಿಯೋರ್ವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿದ್ದ ಆಗ್ನೇಯ ವಿಭಾಗದ ಸೈಬರ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ರಮೇಶ ಜಾರಕಿಹೊಳಿ CD ಪ್ರಕರಣ: ಬಿ ರಿಪೋರ್ಟ್ ಸಲ್ಲಿಸಿದ SIT

Related Articles

Back to top button