ಪ್ರಗತಿವಾಹಿನಿ ಸುದ್ದಿ; ಮುಂಬೈ: ಗಾನಕೋಗಿಲೆ ಖ್ಯಾತಿಯ ಲತಾ ಮಂಗೇಶ್ಕರ್ ಇಹಲೋಕ ತ್ಯಜಿಸಿದ್ದು ಇಡೀ ದೇಶ ಕಂಬನಿ ಮಿಡಿಯುತ್ತಿದೆ. ಇನ್ನು ಬಾಲಿವುಡ್ ಸ್ಟಾರ್ಗಳು ಸೇರಿದಂತೆ ಸಾವಿರಾರು ಗಣ್ಯರು ಲತಾ ಮಂಗೇಶ್ಕರ್ ಅವರ ಅಂತಿಮ ದರ್ಶನಕ್ಕೆ ಆಗಮಿಸಿದ್ದಾರೆ. ಆದರೆ ಖ್ಯಾತ ನಟ ಶಾರೂಕ್ ಖಾನ್ ಅವರು ಅಂತಿಮ ದರ್ಶನ ಪಡೆಯುತ್ತಿರುವ ಚಿತ್ರ ವಿಪರೀತ ಗೊಂದಲ ಸೃಷ್ಟಿಸಿದೆ.
ಶಾರೂಖ್ ಅವರು ಲತಾ ಮಂಗೇಶ್ಕರ್ ಪಾರ್ಥಿವ ಶರೀರದ ಮುಂದೆ ನಿಂತು ಮುಸ್ಲಿಂ ಸಂಪ್ರದಾಯದAತೆ ಬೊಗಸೆಯೊಡ್ಡಿ ಪ್ರಾರ್ಥನೆ (ದುವಾ) ಸಲ್ಲಿಸುತ್ತಿದ್ದಾರೆ. ಅವರ ಪಕ್ಕದಲ್ಲಿ ಮಹಿಳೆಯೊಬ್ಬರು ಹಿಂದೂ ಧಾರ್ಮಿಕ ಪದ್ಧತಿಯ ಪ್ರಕಾರ ನಮಸ್ಕಾರ ಮಾಡುತ್ತಿದ್ದಾರೆ. ಚಿತ್ರದಲ್ಲಿರುವ ಮಹಿಳೆ ಶಾರೂಕ್ ಪತ್ನಿ ಗೌರಿ ಖಾನ್ ಎಂದು ಅನೇಕರು ಭಾವಿಸಿದ್ದಾರೆ. ಅನೇಕ ವಾಹಿನಿಗಳ ವರದಿಯಲ್ಲೂ ಅದೇ ರೀತಿ ವರದಿಯಾಗಿದೆ.
ಆದರೆ ವಾಸ್ತವದಲ್ಲಿ ಶಾರೂಕ್ ಖಾನ್ ಜೊತೆ ಇದ್ದಿದ್ದು ಅವರ ಮ್ಯಾನೇಜರ್ ಪೂಜಾ ದದ್ಲಾನಿ ಎಂಬ ಸತ್ಯ ನಂತರದಲ್ಲಿ ಗೊತ್ತಾಗಿದೆ.
ಕಾರಣವೇನು ?
ಚಿತ್ರದಲ್ಲಿ ಪೂಜಾ ಮಾಸ್ಕ್ ಧರಿಸಿದ್ದ ಕಾರಣ ಅವರ ಮುಖ ಸರಿಯಾಗಿ ಗೋಚರಿಸುತ್ತಿಲ್ಲ, ಅಲ್ಲದೆ ಇಂಥಹ ಸಂದರ್ಭಗಳಲ್ಲಿ ಪತ್ನಿಯ ಜೊತೆ ಬರುವುದು ಬಿಟ್ಟು ಕಿಂಗ್ ಖಾನ್ ತನ್ನ ಮ್ಯಾನೇಜರ್ ಜೊತೆ ಬಂದಿದ್ದು ಕೂಡ ಚರ್ಚೆಯಾಗುತ್ತಿದೆ.
ಇನ್ನು ಶಾರೂಕ್ರ ಮ್ಯಾನೇಜರ್ ಪೂಜಾ ಅನೇಕ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಶಾರೂಕ್ ಕುಟುಂಬದ ಜೊತೆಗಿನ ತನ್ನ ಫೋಟೊವನ್ನು ಹಂಚಿಕೊಳ್ಳುತ್ತಾರೆ. ಅಲ್ಲದೇ ಇತ್ತೀಚೆಗೆ ಶಾರೂಕ್ ಪುತ್ರ ಆರ್ಯನ್ ಖಾನ್ರ ಡ್ರಗ್ಸ್ ಕೇಸ್ ವಿಚಾರವಾಗಿಯೂ ಪೂಜಾ ಸುದ್ದಿಯಾಗಿದ್ದರು. ಬಳಿಕ ಅವರು ಅನಾರೋಗ್ಯಗೊಂಡಿದ್ದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ವಿಚಾರಣೆ ನಡೆಸಿರಲಿಲ್ಲ.
ಇನ್ನು ಇತ್ತೀಚೆಗೆ ಶಾರೂಕ್ ಸಹ ಆರ್ಯನ್ ಡ್ರಗ್ಸ್ ಪ್ರಕರಣದ ಬಳಿಕ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಸಧ್ಯ ಅವರು ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ಜೊತೆಗಿನ ಚಿತ್ರವೊಂದರ ಸಿದ್ಧತೆಯಲ್ಲಿ ಬ್ಯೂಸಿಯಾಗಿದ್ದಾರೆ ಎಂದು ವರದಿಯಾಗಿದೆ.
ಬ್ಲ್ಯಾಕ್ ಮೇಲ್ ಪ್ರಕರಣ; ಮಹಿಳೆಯ ವಿರುದ್ಧ ದೂರು ದಾಖಲಿಸಿದ ಬಿಜೆಪಿ ಶಾಸಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ