ಕಣ್ಣು ಬಿಡಿಸಿ ಕೆಲಸವನ್ನೇ ಕಳೆದುಕೊಂಡ ಸೆಕ್ಯುರಿಟ್ ಗಾರ್ಡ್!

ಟ್ರೆಟ್ಯಾಕೋವ್   : ಮಂಗನ ಕೈಯ್ಯಲ್ಲಿ ಮಾಣಿಕ್ಯ ಎಂಬ ಗಾದೆ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಪ್ರಚಲಿತದಲ್ಲಿದೆ. ಆಯಾ ವಸ್ತುವಿನ ಮೌಲ್ಯ ಅವರವರಿಗೇ ಗೊತ್ತಿರುತ್ತದೆ, ಮಂಗನಿಗೆ ಮಾಣಿಕ್ಯದ ಬೆಲೆ ತಿಳಿಯುವುದಿಲ್ಲ ಎಂಬುದು ಗಾದೆಯ ಸಾರಾಂಶ. ಥೇಟ್ ಈ ಗಾದೆಗೆ ನಿದರ್ಶನವೊಂದು ರಷ್ಯಾದಲ್ಲಿ ನಡೆದಿದೆ.

ಸೆಂಟ್ರಲ್ ರಷ್ಯಾದ ಟ್ರೆಟ್ಯಾಕೋವ್ ಆರ್ಟ್ ಗ್ಯಾಲರಿಯಲ್ಲಿ ೧೯೩೨ರ ಸುಮಾರಿಗೆ ರಚಿಸಿದ್ದ ಅದ್ಭುತ ಕಲಾಕೃತಿಯೊಂದಿದೆ. ಥ್ರಿ ಫಿಗರ್ಸ್ ಹೆಸರಿನ ಈ ಕಲಾಕೃತಿ ಸುಮಾರು ೭.೫೦ ಕೋಟಿ ರೂ. ಬೆಲೆ ಬಾಳುತ್ತದೆ.

ಆದರೆ ಈ ಆರ್ಟ್ ಮ್ಯೂಸಿಯಂನ ಸೆಕ್ಯುರಿಟಿ ಗಾರ್ಡ್ ಒಬ್ಬ ಭಾರಿ ಪ್ರಮಾದವನ್ನೇ ಎಸಗಿದ್ದಾನೆ.

ಕಣ್ಣು ಬಿಡಿಸಿದ ಭೂಪ

ಆರ್ಟ್ ಮ್ಯೂಸಿಯಂನಲ್ಲಿ ಆನಾ ಲೆಪರಸ್ಕೋವಾ ಎಂಬ ಕಲಾವಿದರು ರಚಿಸಿದ್ದ ಥ್ರೀ ಫಿಗರ್ಸ್ ಜಗದ್ವಿಖ್ಯಾತಿ ಪಡೆದ ಪೇಂಟಿಂಗ್ ಆಗಿದೆ. ಈ ಪೇಂಟಿಂಗ್ ೨೦೨೧ರಲ್ಲಿ ಆಯೋಜಿಸಿದ್ದ ವಿಶ್ವ ಮಟ್ಟದ ಚಿತ್ರ ಪ್ರದರ್ಶನದಲ್ಲೂ ಕಲಾಪ್ರೇಮಿಗಳಿಂದ ಅಪಾರ ಮೆಚ್ಚುಗೆ ಗಳಿಸಿದೆ. ಮೂರು ಮುಖಗಳು ಚಿತ್ರದಲ್ಲಿದ್ದು ಅವುಗಳಿಗೆ ಕಣ್ಣಿಲ್ಲ. ಇದು ಸಾಂಕೇತಿಕವಾಗಿ ನೂರಾರು ವಿಷಯಗಳನ್ನು ಹೇಳುವ ನವ್ಯ ಮಾದರಿಯ ಪೇಂಟಿಂಗ್ ಆಗಿದೆ.

ಆದರೆ ಚಿತ್ರದ ಮೌಲ್ಯ ತಿಳಿಯದ ಕಾವಲಿಗಿದ್ದ ಸೆಕ್ಯುರಿಟಿ ಗಾರ್ಡ್ ಕುಳಿತು ಕುಳಿತು ಬೋರ್ ಆಗಿದ್ದನಂತೆ. ಹಾಗಾಗಿ ತನ್ನ ಕಿಸೆಯಲ್ಲಿದ್ದ ಬಾಲ್ ಪೆನ್ನಿನಿಂದ ಒಂದು ಮುಖದ ಮೇಲೆ ಕಣ್ಣುಗಳನ್ನು ಬಿಡಿಸಿದ್ದಾನೆ !

ಕೆಲ ಸಮಯದ ಬಳಿಕ ಆರ್ಟ್ ಗ್ಯಾಲರಿಗೆ ಬಂದ ಹಿರಿಯ ಅಧಿಕಾರಿಗಳು ಜಗದ್ವಿಖ್ಯಾತ ಚಿತ್ರದ ಮೇಲೆ ಕಣ್ಣುಗಳು ಮೂಡಿದ್ದು ಕಂಡು ಗಾಬರಿಗೊಂಡಿದ್ದಾರೆ. ಸೆಕ್ಯುರಿಟಿಯನ್ನು ವಿಚಾರಿಸಲಾಗಿ, ಬೋರ್ ಆಗುತ್ತಿತ್ತು ಹೊತ್ತು ಕಳೆಯಲು ಕಣ್ಣು ಬಿಡಿಸಿದೆ. ಮುಖಕ್ಕೆ ಕಣ್ಣಿರಲಿಲ್ಲವಲ್ಲ, ಅದು ಸರಿ ಕಾಣುತ್ತಿರಲಿಲ್ಲ, ಹಾಗಾಗಿ ಹೊತ್ತು ಕಳೆಯಲು ಬಿಡಿಸಿದೆ ಎಂದು ಉತ್ತರಿಸಿದ್ದಾನೆ. ಸೆಕ್ಯುರಿಟಿ ಗಾರ್ಡ್‌ನ ಉತ್ತರಕ್ಕೆ ಮ್ಯೂಸಿಯಂನ ಅಧಿಕಾರಿಗಳು ಮೂರ್ಛೆ ಹೋಗುವುದೊಂದೆ ಬಾಕಿ.

ಸಧ್ಯ, ರಷ್ಯಾದ ಖ್ಯಾತ ಕಲಾವಿದರನ್ನು ಕರೆಸಿ ಚಿತ್ರವನ್ನು ಮೊದಲಿನ ಸ್ಥಿತಿಗೆ ತರಲು ಅಧಿಕಾರಿಗಳು ಹೆಣಗಾಡುತ್ತಿದ್ದಾರೆ. ಸರಿಪಡಿಸಲು ಸುಮಾರು 20 ಲಕ್ಷ ರೂ. ವೆಚ್ಚ ತಗುಲಲಿದೆ.

ಅದೇ ದಿನ ಕೆಲಸಕ್ಕೆ ಸೇರಿದ್ದ ಸೆಕ್ಯುರಿಟ್ ಗಾರ್ಡ್ ಗೆ ಮನೆ ದಾರಿ ತೋರಿಸಲಾಗಿದೆ.

ರೈತನ ಖಾತೆಗೆ ಬಿತ್ತು 15 ಲಕ್ಷ, ಮೋದಿ ಹಾಕಿದ್ದಾರೆಂದು ತಿಳಿದು ಮನೆ ಕಟ್ಟಿಸಿದ ಮುಗ್ಧ !

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button