Latest
ಮದುವೆ ಆರತಕ್ಷತೆ ದಿನ ಕುಸಿದು ಬಿದ್ದ ವಧು; ಬ್ರೇನ್ ಡೆಡ್ ಎಂದು ಘೋಷಿಸಿದ ನಿಮ್ಹಾನ್ಸ್

ಪ್ರಗತಿವಾಹಿನಿ ಸುದ್ದಿ; ಕೋಲಾರ: ತನ್ನದೇ ಮದುವೆ ಆರತಕ್ಷತೆ ವೇಳೆ ಮದುಮಗಳು ಕುಸಿದು ಬಿದ್ದು ಬ್ರೇನ್ ಡೆಡ್ ಆಗಿರುವ ಹೃದಯವಿದ್ರಾವಕ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ.
ಮದುವೆ ಆರತಕ್ಷತೆ ಸಂಭ್ರಮದಲ್ಲಿದ್ದ 26 ವರ್ಷದ ಚೈತ್ರಾ, ಅಸ್ವಸ್ಥಗೊಂದು ಕುಸಿದು ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಬ್ರೇನ್ ಡೆಡ್ ಎಂದು ಘೋಷಿಸಿದ್ದಾರೆ.
ಮಗಳ ಬ್ರೇನ್ ಡೆಡ್ ಎಂದು ಘೋಷಿಸುತ್ತಿದ್ದಂತೆ ತಂದೆ-ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ. ದು:ಖದ ನಡುವೆಯೂ ಸಮಯಪ್ರಜ್ಞೆಯಿಂದ ಮಗಳ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ. ಈ ಮೂಲಕ ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.




