Latest

ಶಾಂತಿ, ನೆಮ್ಮದಿಗಾಗಿ ಸತ್ಸಂಗ ಬೇಕು  -ಬಸವಾನಂದ ಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
‘ಮನುಷ್ಯನಿಗೆ ಶಾಂತಿ, ನೆಮ್ಮದಿ ದೊರೆಯಬೇಕಾದರೆ ಆಧ್ಯಾತ್ಮಿಕ ಹಾಗೂ ಸತ್ಸಂಗದ ಅವಶ್ಯವಿದೆ’ ಎಂದು ಖಾನಟ್ಟಿಯ ಮಲ್ಲಿಕಾರ್ಜುನಮಠದ ಬಸವಾನಂದ ಸ್ವಾಮೀಜಿ ಹೇಳಿದರು.
ಇಲ್ಲಿಯ ಗ್ರಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದವರು ಲಕ್ಕಪ್ಪ ಕಪ್ಪಲಗುದ್ದಿ ಅವರ ಆತಿಥ್ಯದಲ್ಲಿ ಜರುಗಿದ ಶಿವಾನುಭವ ಗೋಷ್ಠಿ ಮತ್ತು ಭಜನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆಸೆ, ದುರಹಂಕಾರ, ದ್ವೇಷಗಳನ್ನು ಬಿಟ್ಟು ಸಂತೋಷದಿಂದ ಬದುಕುವುದನ್ನು ಕಲಿಯಬೇಕು ಎಂದರು.
ಶಿವಪುತ್ರಯ ಮಠಪತಿ ಪ್ರಾಸ್ತಾವಿಕ ಮಾತನಾಡಿದರು. ಆಕಾಶವಾಣಿ ಭಜನಾ ಕಲಾವಿದ ನಾಗೇಶ ಐಹೊಳೆ, ಮಹಲಿಂಗಪ್ಪ ಯಡಯನ್ನವರ, ಶಿವಲಿಂಗ ಮುನ್ಯಾಳ, ಮಾರುತಿ ಗೋಕಾಕ, ಮಾದೇವ ಬಿದರಿ ಇವರು ಭಜನೆಯನ್ನು ಮಾಡಿದರು.
ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈಶ್ವರ ಗೊಲಶೆಟ್ಟಿ ನಿರೂಪಿಸಿ, ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button