Latest

ಕಾರವಾರದ ಅಪ್ರಾಪ್ತೆಗೆ ಬ್ಲ್ಯಾಕ್ ಮೇಲ್: ಯಲ್ಲಾಪುರದ ಖಾಸಗಿ ಕಂಪನಿ ಉದ್ಯೋಗಿ ವಿರುದ್ಧ ಕ್ರಮ

ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಪ್ರಗತಿ ವಾಹಿನಿ ಸುದ್ದಿ ಕಾರವಾರ –ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಸುವುದಾಗಿ ನಂಬಿಸಿ ಅವಳ ಜೊತೆಗೆ ಅಶ್ಲೀಲ ಫೋಟೊ ತೆಗೆಸಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯ ವಿರುದ್ಧ  ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿ ಕಾರವಾರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಅಪ್ರಾಪ್ತ ಬಾಲಕಿಯು ತನ್ನ ಸ್ನೇಹಿತೆಯೊಂದಿಗೆ ವಾಸಿಸುತ್ತಿದ್ದು ಆಕೆಗೆ ಆರೋಪಿತನಾದ ಯಲ್ಲಾಪುರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶ್ರೀಕಾಂತ ತುಕಾರಾಮ್ ಕಾಂಬಳೆ ಎಂಬ 33 ವರ್ಷದ ವ್ಯಕ್ತಿ ಪ್ರೀತಿಸುವುದಾಗಿ, ಮದುವೆಯಾಗುವುದಾಗಿ ಬಲವಂತ ಮಾಡುತ್ತಿದ್ದ.

Home add -Advt

ಬಾಲಕಿಯೊಂದಿಗಿನ ಅಶ್ಲೀಲ ಫೋಟೋವನ್ನು ತೆಗೆದು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುವುದಾಗಿ ಹೆದರಿಸುತ್ತಿದ್ದ. ಆ ಫೋಟೋವನ್ನು ಬಾಲಕಿಯ ವಾಟ್ಸಪ್ ಗೆ ಕಳುಹಿಸಿ ಹೆದರಿಸುತ್ತಿದ್ದಾನೆಂದು ಬಾಲಕಿಯು ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಕಾನೂನು  ಕ್ರಮವನ್ನು ಕೈಗೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸತೀಶ್ ಜಾರಕಿಹೊಳಿ ಗೋವಾಕ್ಕೆ ಧಾವಿಸಿದ್ದೇಕೆ?

Related Articles

Back to top button