ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವವು ಏ.೨೩ ರಿಂದ ಏ. ೨೭ ವರೆಗೆ ನಡೆಯಲಿದ್ದು, ಈ ವೇಳೆ ವಿವಿಧ ಕಾರ್ಯಕ್ರಮಗಳು ಜರಗುಲಿವೆ.
ಏ.೨೩ ರಂದು ಯರಗೊಪ್ಪದ ಲೀಲಾಮಠ ಶ್ರೀ ನಿತ್ಯಾನಂದ ಶ್ರೀಗಳಿಂದ ರಥಕ್ಕೆ ಕಳಸಾರೋಹಣ ಹಾಗೂ ಗ್ರಾಮದೇವಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೧೦ ಗಂಟೆಗೆ ಗೋಕಾಕ ತಾಲೂಕಿನ ರಾಜಾಪೂರದ ಶ್ರೀ ಚೊನ್ನಮ್ಮದೇವಿ ಡೊಳ್ಳಿನ ಗಾಯನ ಸಂಘದಿಂದ ನಾಗೇಶಿ ಹಾಗೂ ಹುಕ್ಕೇರಿ ತಾಲೂಕಿನ ಸುಲ್ತಾನಪೂರದ ಶ್ರೀ ರಾಮಲಿಂಗೇಶ್ವರ ಡೊಳ್ಳಿನ ಗಾಯನ ಸಂಘದಿಂದ ಹರದೇಶಿ ಡೊಳ್ಳಿನಪದಗಳ ಪ್ರದರ್ಶನವಾಗಲಿದೆ.
ಏ.೨೪ ರಂದು ರಾತ್ರಿ ೮ ಗಂಟೆಗೆ ನಾವಲಗಟ್ಟಿ ಗ್ರಾಮದ ಶ್ರೀ ಮಾರುತಿ ಭಜನಾ ಮಂಡಳಿದಿಂದ ಭಜನಾ ಸ್ಪರ್ಧೆ ನಡೆಯಲಿದೆ. ಏ.೨೫ ರಂದು ಮುಂಜಾನೆ ೫ ಗಂಟೆಗೆ ಶ್ರೀ ಮಾರುತಿ ದೇವರ ರುದ್ರಾಭಿಷೇಕ ಹಾಗೂ ಮಧ್ಯಾಹ್ನ ೧೨ ಗಂಟೆಗೆ ಮಹಾಪ್ರಸಾದ, ಮಧ್ಯಾಹ್ನ ೧ ಗಂಟೆಗೆ ಶ್ರೀ ಮಾರುತಿ ದೇವಸ್ಥಾನದ ಹತ್ತಿರ ನಿಧಾನವಾಗಿ ದ್ವಿಚಕ್ರ ವಾಹನ ಓಡಿಸುವ ಸ್ಪರ್ಧೆ, ರಾತ್ರಿ ೮ ಗಂಟೆಗೆ ಸ್ಥಳಿಯ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಕಲಾವಿದರಿಂದ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ.
ಏ.೨೬ ರಂದು ಮುಂಜಾನೆ ೮ ಗಂಟೆಗೆ ಗ್ರಾಮಸ್ಥರಿಂದ ಗ್ರಾಮದೇವಿಗೆ ಉಡಿತುಂಬುವ ಕಾರ್ಯಕ್ರಮ, ರಾತ್ರಿ ೮ ಗಂಟೆಗೆ ಜನಪದ ಕಲಾವಿದ ಜಂತಲಿ ಶಿರೂರಿನ ಶ್ರೀ ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರಿಂದ ಜನಪ ಹಾಸ್ಯಸಂಜೆ ಹಾಗೂ ಸ್ಥಳೀಯ ಕಲಾವಿದರಿಂದ ಮನರಂಜನಾ ಕಾರ್ಯಕ್ರಮಗಳು ಜರಗುಲಿವೆ.
ಏ.೨೭ ರಂದು ಪುನರ್ವಸತಿ ಕೇಂದ್ರ ನಂ- ೧ ಮತ್ತು ೨ ರಿಂದ ಪಲ್ಲಕ್ಕಿ ಉತ್ಸವ ಆಗಮನ, ಸಾಯಂಕಾಲ ೪ ಗಂಟೆಗೆ ಶ್ರೀ ಮಾರುತಿ ದೇವರ ರಥೋತ್ಸವ ಜರುಗಲಿದೆ. ರಾತ್ರಿ ೧೦.೩೦ ಕ್ಕೆ ನಾವಲಟ್ಟಿ ಗ್ರಾಮದ ಸುವರ್ಣ ಕರ್ನಾಟಕ ಕಲಾ ನಾಟ್ಯ ಸಂಘದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನವಾಗಲಿದೆ ಎಂದು ಶ್ರೀ ಮಾರುತಿ ದೇವರ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ