Kannada NewsKarnataka NewsLatest

ಸಂಕೇಶ್ವರ ಅಪಘಾತ: ಡಾ.ಸಚಿನ್ ಮುರಗುಡೆ ಕೂಡ ಸಾವು, ಉಳಿದವರು ವೃದ್ಧ ತಾಯಿ ಮಾತ್ರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಸ್ತೆ ಬದಿಗೆ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ವೈದ್ಯ ದಂಪತಿ ಹಾಗೂ ಮಗಳು ಮೃತರಾಗಿದ್ದಾರೆ.

ಸಂಕೇಶ್ವರದ ನೇತ್ರ ತಜ್ಞ ಡಾ. ಸಚಿನ್ ಮುರಗುಡೆ (40), ಸ್ತ್ರೀ ರೋಗ ತಜ್ಞೆ ಶ್ವೇತಾ ಮುರಗುಡೆ (38) ಹಾಗೂ ಮಗಳು ಶ್ರಿಯಾ (12) ಮೃತರು.

Home add -Advt

ಸ್ಥಳದಲ್ಲಿ ಡಾ.ಶ್ವೇತಾ ಮತ್ತು ಶ್ರಿಯಾ ಸಾವಿಗೀಡಿಗಿದ್ದರು. ಡಾ.ಸಚಿನ್ ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಅವರೂ ಸಾವಿಗೀಡಾಗಿದ್ದಾರೆ. ಅವರ ಕುಟುಂಬದಲ್ಲಿ ವೃದ್ಧ ತಾಯಿ ಮಾತ್ರ ಉಳಿದಿದ್ದಾರೆ.

ದಂಪತಿ ಸಂಕೇಶ್ವರದಲ್ಲಿ ಪ್ರಸಿದ್ಧ ಮುರಗುಡೆ ನರ್ಸಿಂಗ್ ಹೋಮ್ ನಡೆಸುತ್ತಿದ್ದರು.  ಸಂಕೇಶ್ವರದಲ್ಲಿ ಜನರು ಕಂಬನಿ ಮಿಡಿಯುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆನಕನಹಳ್ಳಿ ಬಳಿ ಘಟನೆ ನಡೆದಿದೆ. ವೇಗವಾಗಿ ಬಂದ ಕಾರು ರಸ್ತೆ ಬದಿಗೆ ನಿಂತಿದ್ದ ಲಾರಿಗೆ ಡಿಕ್ಕಿಯಾಗಿದೆ.

ಯಮಕನಮರಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಡಿಸಿಸಿ ಬ್ಯಾಂಕ್ ಕ್ಲರ್ಕ್ ಬಸವರಾಜನೇ ಕಳ್ಳತನದ ರೂವಾರಿ; ಹಣ, ಆಭರಣ ಸಹಿತ ಮೂವರ ಬಂಧನ

Related Articles

Back to top button