Kannada NewsLatest

ಹಿಜಾಬ್ ಬಗ್ಗೆ ಗೊಂದಲ ಸೃಷ್ಟಿಸಿದ್ದೇ ಬಿಜೆಪಿಯವರು; ಸತೀಶ್ ಜಾರಕಿಹೊಳಿ ಆರೋಪ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಿಜಾಬ್ ವಿವಾದ ಕುರಿತು ಹೈಕೋರ್ಟ್ ನೀಡಿರುವ ತೀರ್ಪು ಒಂದೇ ಧರ್ಮದ ವಿರುದ್ಧವೇನೂ ಅಲ್ಲ ತರಗತಿಗಳಲ್ಲಿ ಎಲ್ಲಾ ಧರ್ಮದ ಬಣ್ಣ, ವಸ್ತ್ರಗಳನ್ನು ನಿಷೇಧ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಹಿಜಾಬ್ ಕುರಿತಾಗಿ ಹೈಕೋರ್ಟ್ ಆದೇಶ ಎಲ್ಲರೂ ಪಾಲಿಸಬೇಕು. ಮೊದಲು ಬಹುತೇಕರು ತರಗತಿಗಳಲ್ಲಿ ಹಿಜಾಬ್ ಧರಿಸುತ್ತಿರಲಿಲ್ಲ. ಆದರೆ ಬಿಜೆಪಿಯವರೇ ರಾಜ್ಯದಲ್ಲಿ ಈ ಬಗ್ಗೆ ಗೊಂದಲ ಸೃಷ್ಟಿ ಮಾಡಿದರು ಎಂದರು.

ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಬಹುದು. ಈ ಹಿಂದೆ ರಾಮಜನ್ಮಭೂಮಿ ವಿವಾದದಲ್ಲಿಯೂ ಹಲವರು ಸುಪ್ರೀಂ ಮೊರೆ ಹೋಗಿದ್ದರು. ಸುಪ್ರೀಮ್ ಕೋರ್ಟ್ ಆದೇಶವನ್ನು ಎಲ್ಲಾ ಸಮುದಾಯದವರು ಒಪ್ಪಿಕೊಂಡರು. ವೈಯಕ್ತಿಕವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವವರಿಗೆ ನಾವು ಬೇಡ ಎನ್ನಲು ಆಗುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ನಲ್ಲಿ ನಾಯಕತ್ವ ಬದಲಾವಣೆ ಇಲ್ಲ:
ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಮಾಡಲು ಆಗಲ್ಲ. ಯಾಕಂದರೆ ಸೋನಿಯಾ ಗಾಂಧಿ ಅವರು ಇಲ್ಲ ಅಂದರೆ ಕಾಂಗ್ರೆಸ್‌ ಪಕ್ಷ ನಡೆಯಲ್ಲ. ಹೀಗಾಗಿ ಹಿಂದೆ ಕೂಡಾ ಬೇರೆ ಬೇರೆಯವರೂ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಆದರೂ ಕೂಡಾ ಅಧ್ಯಕ್ಷ ಸ್ಥಾನ ಸೋನಿಯಾ ಗಾಂಧಿಯವರಿಗೆ ಅನಿವಾರ್ಯವಾಗಿದೆ. ಅಲ್ಲದೇ ಸೋನಿಯಾ ಗಾಂಧಿ ಅವರು ಅಧ್ಯಕ್ಷ ಸ್ಥಾನ ಅಲಂಕರಿಸಬೇಕೆಂಬ ಬಹಳ ಜನರ ಅಭಿಪ್ರಾಯ ವಾಗಿದ್ದರಿಂದ ಅವರನ್ನೆ ಅಧ್ಯಕ್ಷರನ್ನಾಗಿ ಮುಂದುವರಿಸಲಾಗುತ್ತಿದೆ ಎಂದರು.

ಕರ್ನಾಟಕದಲ್ಲಿದೆ ನಮ್ಮದೆ ವೋಟ್‌ ಬ್ಯಾಂಕ್:

ಕರ್ನಾಟಕದಲ್ಲಿ ನಮ್ಮದೆಯಾದಂತೆ ವೋಟ್‌ ಬ್ಯಾಂಕ್‌ ಇದೆ. ಕರ್ನಾಟಕವನ್ನು ಗೋವಾ ಹಾಗೂ ಯುಪಿ ಗೆ ಹೋಲಿಸಲು ಆಗಲ್ಲ. ಈ ಚುನಾವಣೆಯಿಂದ ನಾವು ಪಾಠ ಕಲಿತ್ತಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಲಾಗುವುದು ಎಂದು ಹೇಳಿದರು.

ಅಪ್ರಚಾರ ಮಾಡುವಲ್ಲಿ ಬಿಜೆಪಿ ನಿಸ್ಸಿಮರು: ಅಪ್ರಚಾರ ಮಾಡುವಲ್ಲಿ ಬಿಜೆಪಿಯದ್ದು ಹೆಚ್ಚಿನ ಮಹತ್ವ ನೀಡುತ್ತಿದೆ. ಉದಾಹರಣೆಗೆ ಶಿವಮುಗ್ಗ ಪ್ರಕರಣವನ್ನು ಹೈಲೆಟ್ಸ್‌ ಮಾಡಿದ್ದಾರೆ. ಉಡುಪಿಯಲ್ಲಿ ಹಾಗೂ ಬಿಜಾಪುರದಲ್ಲಿ ನಮ್ಮವರು ಕೂಡಾ ಸತ್ತಿದ್ದು, ಅದು ಬೆಳಕಿಗೆ ಕೂಡಾ ಬರಲಿಲ್ಲ. ಇವರ ಕಾರ್ಯಕರ್ತ ಸತ್ತರೆ ಹಿಂದೂ ಅಂತಾ ಬಿಂಬಿಸಲಾಗುತ್ತೆ. ನಮ್ಮವರೂ ಸತ್ತಾಗ ಕುರುಬರು ಹಾಗೂ ದಲಿತರು ಎಂದು ಬಿಂಬಿಸಲಾಗುತ್ತದೆ. ಇದು ಬಿಜೆಪಿಯವರು ಮಾಡುತ್ತಿರುವ ಅಪ್ರಚಾರದ ಕಾರ್ಯ ಎಂದು ಆರೋಪಿಸಿದರು.

ಧಂಗೆ ಮಾಡಿಸೋದೆ ಬಿಜೆಪಿ:

ಈಗ ಬಿಜೆಪಿಯವರು ಹೊಸದೊಂದು ಅಪ್ರಚಾರ ಪ್ರಾರಂಭಿಸಿದ್ದಾರೆ ಅದುವೇ ದಿ ಕಾಶ್ಮಿರ ಪೈಲ್ಸ್‌ ಚಿತ್ರ, ಇದು ಬಿಜೆಪಿಯವರ ಅಜೆಂಡಾ ಆಗಿದೆ. ರಾಜ್ಯದಲ್ಲಿರುವ ಜನರಿಗೆ ನೀರು, ಉತ್ತಮ ರಸ್ತೆ, ಉದ್ಯೋಗ ನೀಡದೇ ಕೇವಲ 10 ರೂ. ಶಾಲು ಹಾಕಿಕೊಂಡು ಧಂಗೆ ಮಾಡೋದೆ ಬಿಜೆಪಿಯವರ ಮುಖ್ಯ ಕೆಲಸವಾಗಿದೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್‌ ಸಭೆ:

ಮುಂಬರುವ 2023 ಚುನಾವಣೆ ಹಿನ್ನಲೆಯಲ್ಲಿ ಬೆಳಗಾವಿ ದಕ್ಷಿಣ ಹಾಗೂ ಉತ್ತರ ಕ್ಷೇತ್ರದ ಆಹ್ವಾನಿತ ಹಾಗೂ ಮುಖಂಡರ ಜತೆ ಕಾಂಗ್ರೆಸ್‌ ಭವನದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ದಕ್ಷಿಣ ಹಾಗೂ ಉತ್ತರ ಕ್ಷೇತ್ರದ ಅಭ್ಯರ್ಥಿಗಳ ಗೆಲುವು ಸಾಧಿಸುವ ಬಗ್ಗೆ ಹಾಗೂ ಪಕ್ಷ ಸಂಘಟಿಸುವ ಕುರಿತು ಕಾರ್ಯಕರ್ತರಿಗೆ ಮನವರಿಕೆ ಮಾಡಲಾಯಿತು. ಇದರ ಜತೆ ದಕ್ಷಿಣ ಕ್ಷೇತ್ರಕ್ಕೆ ಆಶ್ಚರಕರ ಪ್ರಭಾವಿ ನಾಯಕರ ಕಣಕ್ಕೆ ಇಳಿಸಲಾಗುವುದು ಎಂದು ಶಾಸಕ ಸತೀಶ್‌ ಜಾರಕಿಹೊಳಿ ಸುಳಿವು ನೀಡಿದರು.

ನಮಗೆ ಹಿಜಾಬ್, ಶಿಕ್ಷಣ ಎರಡೂ ಮುಖ್ಯ; ಹೋರಾಟ ಮುಂದುವರೆಸುತ್ತೇವೆ ಎಂದ ಮುಸ್ಲೀಂ ವಿದ್ಯಾರ್ಥಿನಿಯರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button