Latest

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಪಾದ್ರಿ ಬಂಧನ

ಪ್ರಗತಿವಾಹಿನಿ ಸುದ್ದಿ; ಪಟ್ಟನಂತಿಟ್ಟ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಾದ್ರಿಯೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಪತನಂತಿಟ್ಟದಲ್ಲಿ ನಡೆದಿದೆ.

ಆರ್ಥೊಡಾಕ್ಸ್ ಚರ್ಚ್ ನ ಪಾದ್ರಿ ಪಾಂಡ್ಸನ್ ಜಾನ್ (35) ಬಂಧಿತ ಆರೋಪಿ. ಮಾರ್ಚ್ 12ರಂದು 17 ವರ್ಷದ ಬಾಲಕಿ ಹಾಗೂ ಆಕೆಯ ತಾಯಿ ಕೂಡಲ್ ನಲ್ಲಿರುವ ಪಾದ್ರಿಯ ನಿವಾಸಕ್ಕೆ ಸಮಾಲೋಚನೆ ಹಾಗೂ ಪ್ರಾರ್ಥನೆಗಾಗಿ ತೆರಳಿದ್ದರು. ಈ ವೇಳೆ ಪಾದ್ರಿ ಬಾಲಕಿಗೆ ಕಿರುಕುಳ ನೀಡಿದ್ದಾರೆ. ಅಲ್ಲದೇ ಮಾರನೆಯ ದಿನ ಬಾಲಕಿಯ ಮನೆಗೆ ಬಂದ ಪಾದ್ರಿ ಮತ್ತೆ ಲೈಂಗಿಕ ದೌರ್ಜನ್ಯವೆಸಗಿದ್ದಾಗಿ ಆರೋಪಿಸಲಾಗಿದೆ.

ಕೃತ್ಯದ ಬಗ್ಗೆ ಬಾಲಕಿಯ ಶಾಲೆಯ ಶಿಕ್ಷಕಿ ಚೈಲ್ಡ್ ಲೈನ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಾಲಕಿಯಿಂದ ಹೇಳಿಕೆ ಪಡೆದ ಪೊಲೀಸರು ಆರೋಪಿ ಪಾದ್ರಿಯನ್ನು ಬಂಧಿಸಿದ್ದಾರೆ.
ರಷ್ಯಾ ದಾಳಿಗೆ ಉಕ್ರೇನ್ ಖ್ಯಾತ ನಟಿ ಸಾವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button