ಮಹಿಳೆಯರಿಬ್ಬರಿಗೆ ಅಪರೂಪದ ಶಸ್ತ್ರ ಚಿಕಿತ್ಸೆ; ಅಪಾಯದಿಂದ ಪಾರು ಮಾಡಿದ ಬಿಮ್ಸ್ ವೈದ್ಯರು
ಎಳೆಯ ವಯಸ್ಸಲ್ಲೇ ಗರ್ಭಕೋಶ ಕಳೆದುಕೊಳ್ಳುವ ಭೀತಿಯಿಂದ ಪಾರು
ಪ್ರಗತಿ ವಾಹಿನಿ ಸುದ್ದಿ ಬೆಳಗಾವಿ –
ಎಳೆಯ ವಯಸ್ಸಿನಲ್ಲೇ ಗರ್ಭಕೋಶ ಕಳೆದುಕೊಳ್ಳುವ ಅಪಾಯಕ್ಕೆ ಮಹಿಳೆಯೊಬ್ಬರಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯ ತಜ್ಞ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ,ಗರ್ಭಕೋಶ ಉಳಿಸಲು ಯಶಸ್ವಿಯಾಗಿದ್ದಾರೆ.
೨೮ ವರ್ಷದ ಮಹಿಳೆಯೊಬ್ಬರು ಎರಡು ಮಕ್ಕಳಿಗೆ ಸಹಜ ಹೆರಿಗೆಯ ಮೂಲಕ ಜನ್ಮ ನೀಡಿದ ಬಳಿಕ ಯುಟೆರೊವೆಸಿಕಲ್ ಡಿಸೆಂಟ್ ಎಂಬ ದೈಹಿಕ ತೊಂದರೆಗೆ ಒಳಗಾಗಿದ್ದರು. ಗರ್ಭಾಶಯವು ದೇಹದಿಂದ ಹೊರಗೆ ಬಂದಿದ್ದರಿಂದ ಸಂಕಷ್ಟ ಅನುಭವಿಸಿದ್ದರು.
ಹಲವಾರು ವೈದ್ಯರನ್ನು ಸಂಪರ್ಕಿಸಿದ್ದರೂ ಸಮಸ್ಯೆಗೆ ಪರಿಹಾರ ದೊರೆತಿರಲಿಲ್ಲ. ಹೆಚ್ಚಿನ ವೈದ್ಯರು ಗರ್ಭಾಶಯವನ್ನು ತೆಗೆದುಹಾಕುವುದೊಂದೇ ಮಾರ್ಗ ಎಂಬ ಸಲಹೆ ನೀಡಿದ್ದರು. ಆದರೆ ಸಣ್ಣ ವಯಸ್ಸಿನಲ್ಲೇ ಗರ್ಭಾಶಯ ಕಳೆದುಕೊಳ್ಳುವುದು ಮಹಿಳೆಗೆ ಆತಂಕ ಸೃಷ್ಟಿಸಿತ್ತು.
ಬಳಿಕ ಮಹಿಳೆ ಬಿಮ್ಸ್‌ನ ವೈದ್ಯರಲ್ಲಿ ಪರೀಕ್ಷೆ ಮಾಡಿಸಿ ಪ್ರಸೂತಿ ತಜ್ಞ ವೈದ್ಯ ಡಾ. ಪ್ರಭುರಾಜ ಎ. ಬಾಳಿ ಮತ್ತು ಸಹ ವೈದ್ಯರು ಶಿರೋಡ್ಕರ್ ಸ್ಲಿಂಗ್ ಸರ್ಜರಿ ಎಂಬ ಶಸ್ತ್ರ ಚಿಕಿತ್ಸೆ ನಡೆಸಿ ಮಹಿಳೆಯ ಗರ್ಭಾಶಯವನ್ನು ಉಳಿಸಿದ್ದಾರೆ. ಈ ಅಪರೂಪದ ಶಸ್ತ್ರ ಚಿಕಿತ್ಸೆಯನ್ನು ಬಿಮ್ಸ್‌ನಲ್ಲಿ ಇದೇ ಮೊದಲ ಬಾರಿಗೆ ನಡೆಸಲಾಗಿದ್ದು ಮಹಿಳೆಯ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಲ್ಲದೇ ಮೊದಲ ಬಾರಿಗೆ ಗರ್ಭ ಧರಿಸಿದ್ದ ೨೦ ವರ್ಷದ ಮಹಿಳೆ ಮೂರು ತಿಂಗಳ ಬಳಿಕ ಬಲ ಅಂಡಾಶಯದ ಸಿಸ್ಟೆಕ್ಟಮಿ ತೊಂದರೆಗೆ ಒಳಗಾಗಿದ್ದರು. ಇದನ್ನು ಸಹ ಅತ್ಯಂತ ಸೂಕ್ಷ್ಮ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಗರ್ಭವನ್ನು ಉಳಿಸುವಲ್ಲಿ ಬಿಮ್ಸ್ ವೈದ್ಯರ ತಂಡ ಯಶಸ್ವಿಯಾಗಿದೆ.
ಹಿಜಾಬ್ ವಿವಾದ; ತೀರ್ಪು ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಕರೆ
https://pragati.taskdun.com/national-news/medical-student-surgically-installed-blue-tooth-in-ear/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ