ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಂದಿನ ವಾರ ಬ್ಯಾಂಕ್ ಸೇವೆಯಲ್ಲಿ ಭಾರಿ ವ್ಯತ್ಯಯವಾಗಲಿದೆ. ವಾರದಲ್ಲಿ 2 ದಿನ ಮಾತ್ರ ಬ್ಯಾಂಕ್ ಗಳು ಓಪನ್ ಇರಲಿವೆ.
ಮಾ.27ರಿಂದ 29ರವರೆಗೆ ಬ್ಯಾಂಕ್ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸೋಮವಾರ ಹಾಗೂ ಮಂಗಳವಾರ ಬ್ಯಾಂಕ್ ಬಂದ್ ಆಗಿರಲಿವೆ. ಮಾರ್ಚ್ 30 ಹಾಗೂ 31ರಂದು ಬ್ಯಾಂಕ್ ಓಪನ್ ಇರುತ್ತದೆ. ಏಪ್ರಿಲ್ 1ರಂದು ಹೊಸ ಆರ್ಥಿಕ ವರ್ಷ ಆರಂಭವಾಗುವುದರಿಂದ ಬ್ಯಾಂಕ್ ತೆರೆದಿದ್ದರೂ ಗ್ರಾಹಕ ಸೇವೆ ಇರುವುದಿಲ್ಲ.
ಏಪ್ರಿಲ್ 2ರಂದು ಯುಗಾದಿ ಹಿನ್ನೆಲೆಯಲ್ಲಿ ಬ್ಯಾಂಕ್ ಗೆ ರಜೆ ಇರಲಿದೆ. ಹೀಗಾಗಿ ಮುಂದಿನ ವಾರ 2 ದಿನ ಮಾತ್ರ ಬ್ಯಾಂಕ್ ಕಾರ್ಯನಿರ್ವಹಿಸಲಿದೆ.
ಕಿವಿ ಚಿಕಿತ್ಸೆಗೆ ಆಸ್ಪತ್ರೆಗೆ ಹೋದ ಮಹಿಳೆ ಸಾವು !
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ