Kannada NewsKarnataka NewsLatest

ವಿವಿಧೆಡೆ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ:  ಲಕ್ಷ್ಮಿ ತಾಯಿ ಫೌಂಡೇಶನ್ ನಿಂದ ಬಹುಮಾನ

ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳಕರ್ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಿರೇ ಬಾಗೇವಾಡಿಯಲ್ಲಿ ನಡೆಯತ್ತಿರುವ ಪ್ರೀಮಿಯರ್ ಲೀಗ್ 2022 ರ ಕ್ರಿಕೆಟ್ ಫೈನಲ್ ಪಂದ್ಯಕ್ಕೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾನುವಾರ ಚಾಲನೆ ನೀಡಿದರು.
ಈ ಪ್ರೀಮಿಯರ್ ಕ್ರಿಕೆಟ್ ಸ್ಪರ್ಧೆಯಲ್ಲಿ ಲಕ್ಷ್ಮೀ ತಾಯಿ ಫೌಂಡೇಷನ್‌ ವತಿಯಿಂದ ಬಹುಮಾನಗಳನ್ನು ನೀಡಲಾಗುತ್ತಿದೆ. 
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮಸ್ಥರು, ಕ್ರಿಕೆಟ್ ಪ್ರಿಯರು, ಸಿ ಸಿ ಪಾಟೀಲ ಅಣ್ಣ, ಅಡಿವೇಶ ಇಟಗಿ, ಬಿ ಆರ್ ಪಾಟೀಲ, ಸೈಯದ್ ಸನದಿ, ಸಲೀಂ ಸತ್ತಿಗೇರಿ, ನಿಂಗಪ್ಪ ತಳವಾರ, ಸಲೀಂ ಗೋಕಾಕ, ಗುಲ್ಜರ್, ಸಮೀರ ದೇವಲಾಪೂರ, ಪುರ್ಕಾನ್ ಮುಲ್ಲಾ, ರವಿ  ಗಾಣಗಿ ಹಾಗೂ ಇತರರು ಉಪಸ್ಥಿತರಿದ್ದರು.
 

ಕಂಗ್ರಾಳಿಯಲ್ಲಿ :

 

  ಕಂಗ್ರಾಳಿ ಕೆ ಎಚ್ ಗ್ರಾಮದಲ್ಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಕಮೀಟಿಯ ವತಿಯಿಂದ  ಭವ್ಯ ಹಾಪ್ ಪಿಚ್ ಕ್ರಿಕೆಟ್ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೃಣಾಲ ಹೆಬ್ಬಾಳಕರ್ ಮತ್ತು ಗ್ರಾಮದ ಹಿರಿಯರು ಸೇರಿ ಪಂದ್ಯಾವಳಿಗೆ ಚಾಲನೆಯನ್ನು ನೀಡಿದರು.
ಲಕ್ಷ್ಮೀ ತಾಯಿ ಫೌಂಡೇಷನ್‌ ವತಿಯಿಂದ ವಿಜೇತರಿಗೆ ಬಹುಮಾನಗಳನ್ನು ಘೋಷಿಸಲಾಗಿದೆ. 

Home add -Advt

Related Articles

Back to top button