Latest

ಲತಾ ಮಂಗೇಶ್ಕರ್ ಫೋನ್ ಬಂದಾಗ ಯಾವ ಲತಾ ಎಂದು ಕೇಳಿದ್ದೆ; ಸ್ವಾರಸ್ಯಕರ ನೆನಪು ಹಂಚಿಕೊಂಡ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್

ಪ್ರಗತಿ ವಾಹಿನಿ ಸುದ್ದಿ ಮುಂಬೈ –

ಖ್ಯಾತ ಸಂಗೀತ ನಿರ್ದೇಶಕ, ಕಂಪೋಸರ್ ರಿಕ್ಕಿ ಕೇಜ್ ಪ್ರಸಕ್ತ ಸಾಲಿನ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇದು ಅವರಿಗೆ ಸಿಕ್ಕ ಎರಡನೇ ಗ್ರ್ಯಾಮಿ ಪ್ರಶಸ್ತಿಯಾಗಿದೆ.

ಪ್ರಶಸ್ತಿ ಪಡೆದ ಬಳಿಕ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ವಾರಸ್ಯಕರ ವಿಷಯವನ್ನು ರಿಕ್ಕಿ ಕೇಜ್ ಹಂಚಿಕೊಂಡಿದ್ದಾರೆ.

ರಿಕ್ಕಿ ಕೇಜ್ ೨೦೧೫ರಲ್ಲಿಯೂ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದರು. ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡು ವಾಪಸ್ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಮುಂಬೈನಿಂದ ಲ್ಯಾಂಡ್ ಲೈನ್ ಮೂಲಕ ದೂರವಾಣಿ ಕರೆಯೊಂದು ನನ್ನ ಮೊಬೈಲ್‌ಗೆ ಬಂತು. ಅತ್ತ ಕಡೆಯಿಂದ ೧೬ರ ಯುವತಿಯೊಬ್ಬಳ ಮಧುರವಾದ ಧ್ವನಿಯಲ್ಲಿ ಹಲೋ ನಾನು ಲತಾ ಮತಾಡ್ತಿದ್ದೇನಿ, ನೀವು ರಿಕ್ಕಿನಾ ಎಂಬ ಮಾತು ಕೇಳಿ ಬಂತು.

ನಾನು ಯಾವ ಲತಾ ಎಂದು ಪ್ರಶ್ನಿಸಿದೆ. ಅದಕ್ಕೆ ಆ ಕಡೆಯಿಂದ ನಾನು ಸಂಗೀತಗಾರ್ತಿ ಲತಾ ಎಂಬ ಉತ್ತರ ಬಂತು. ಅಷ್ಟಾದರೂ ಫೋನ್ ಮಾಡಿದವರು ದೇವತಾ ಸ್ವರೂಪಿ ಲತಾ ಮಂಗೇಶ್ಕರ್ ಎಂಬುದು ನನಗೆ ಹೊಳೆಯಲೇ ಇಲ್ಲ,

ಈ ವೇಳೆ ಯಾರೋ ಒಬ್ಬರು ಲತಾ ದಿದಿಯವರ ಫೋನ್ ಕಸಿದುಕೊಂಡು ಮಾತಾಡುತ್ತಿರುವುದು ಲತಾ ಮಂಗೇಶ್ಕರ್ ಎಂದು ತಿಳಿಸಿದರು. ವಾಪಸ್ ಲತಾ ದಿದಿಗೆ ಫೋನ್ ನೀಡಿದಾಗ ಅವರು ನಗುತ್ತಿದ್ದರೆ ನಾನು ಅಕ್ಷರಶಃ ದಿಗ್ಬ್ರಮೆಗೊಂಡಿದ್ದೆ. ಧ್ವನಿ ಗುರುತಿಸಲಾಗದ್ದಕ್ಕೆ ಕ್ಷಮೆ ಕೇಳಿದೆ ಎಂದು ರಿಕ್ಕಿ ಕೇಜ್ ಸ್ವಾರಸ್ಯಕರ ನೆನಪನ್ನು ಹಂಚಿಕೊಂಡಿದ್ದಾರೆ.

22 ಯೂಟ್ಯೂಬ್ ಚಾನಲ್ ಬ್ಯಾನ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button