Latest

ಪುಷ್ಪ ಭಾಗ 2 ಶೂಟಿಂಗ್ ಜುಲೈನಲ್ಲಿ ಶುರು

ಪ್ರಗತಿ ವಾಹಿನಿ ಸುದ್ದಿ; ಹೈದರಾಬಾದ್: ಪುಷ್ಪ ಚಿತ್ರ ಸೂಪರ್ ಹಿಟ್ ಆದ ಬೆನ್ನಲ್ಲೇ ಪುಷ್ಪ ಚಿತ್ರದ ಭಾಗ 2ರ ಚಿತ್ರೀಕರಣಕ್ಕೆ ಚಿತ್ರ ತಂಡ ಸಜ್ಜಾಗಿದೆ. ಜುಲೈನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು ಮುಂದಿನ ಮಾರ್ಚ್- ಏಪ್ರಿಲ್ ವೇಳೆಗೆ ತೆರೆಕಾಣುವ ಸಾಧ್ಯತೆ ಇದೆ ಎಂದು ಟಾಲಿವುಡ್ ಮೂಲಗಳು ತಿಳಿಸಿವೆ.

ಪುಷ್ಪ ದಿ ರೈಸ್ ಚಿತ್ರ ಗಲ್ಲಾ ಪೆಟ್ಟಿಗೆಯನ್ನು ಚಿಂದಿ ಉಡಾಯಿಸಿದೆ. ಪಂಚ ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರ ವಿದೇಶಗಳಲ್ಲೂ ತೆರೆ ಕಂಡು ಅಪಾರ ಯಶಸ್ಸು ಗಳಿಸಿದೆ. ಇಡೀ ಚಿತ್ರದಲ್ಲಿ ಅಲ್ಲೂ ಅರ್ಜುನ್ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಪುಷ್ಪ ಬಿಡುಗಡೆಯಾದ ಸಂದರ್ಭದಲ್ಲೇ ಕೆಲ ಖ್ಯಾತನಾಮರ ಹಿಂದಿ ಚಿತ್ರಗಳೂ ಬಿಡುಗಡೆಯಾಗಿದ್ದವು. ಆದರೆ ಎಲ್ಲ ಸ್ಪರ್ಧೆಯನ್ನೂ ಎದುರಿಸಿ ಮುನ್ನಡೆದ ಪುಷ್ಪ, ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಸೂಪರ್ ಹಿಟ್ ಆಯಿತು.

ಇದರ ಯಶಸ್ಸು ಪುಷ್ಪ-2 ಚಿತ್ರ ನಿರ್ಮಾಣಕ್ಕೆ ಸ್ಪೂರ್ತಿ ತುಂಬಿದೆ ಎಂದು ನಿರ್ದೇಶಕ ಸುಕುಮಾರನ್ ಹೇಳಿಕೊಂಡಿದ್ದಾರೆ. ಪುಷ್ಪ ಭಾಗ 2ರ ಸ್ಕ್ರಿಪ್ಟ್ ಈಗಾಗಲೇ ಸಿದ್ಧಗೊಂಡಿದ್ದು ಅಲ್ಲು ಅರ್ಜುನ್ ಸ್ಕ್ರಿಪ್ಟ್ ಪರಿಶೀಲಿಸಿದ್ದಾರೆ. ಚಿತ್ರೀಕರಣದ ಲೊಕೇಶನ್‍ಗಳನ್ನು ಪರಿಶೀಲಿಸಲಾಗುತ್ತಿದೆ. ಜೂನ್ ಅಂತ್ಯಕ್ಕೆ ಅಥವಾ ಜುಲೈ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ನಡುವೆ ಅಲ್ಲು ಅರ್ಜುನ್ ತಮ್ಮ ಕುಟುಂಬದ ಜೊತೆ ಪ್ರವಾಸಕ್ಕೆ ತೆರಳುವ ಸಿದ್ಧತೆಯಲ್ಲಿದ್ದು ಪುಷ್ಪ ಭಾಗ 2ರ ಚಿತ್ರೀಕರಣದ ವೇಳೆಗೆ ಅವರು ಬಿಡುವಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಎಲ್ಲಾ ಬ್ಯಾಂಕ್ ಎಟಿಎಂ ಗಳಿಗೂ ಕಾರ್ಡ್ ಲೆಸ್ ಕ್ಯಾಶ್ ಸೌಲಭ್ಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button