Latest

ಪಂ.ಪುಟ್ಟರಾಜರ ಮಾಸದ ನೆನಪಿನಲ್ಲಿ ಸಂಗೀತ ಶಿವಾನುಭವ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ಜೀವನ ಸಾಧನೆ ಸಂದೇಶವನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಉದ್ದೇಶವನ್ನು ಇಟ್ಟುಕೊಂಡು ನಾಡಿನ ಅಭಿಮಾನಿ ಭಕ್ತರನ್ನು ಒಂದೇ ವೇದಿಕೆಗೆ ತಂದು ಗುರುಸೇವೆ ಮಾಡುತ್ತಿರುವ ಗದುಗಿನ ಮೂಲದ ಡಾ. ಪಂ.ಪುಟ್ಟರಾಜ ಸೇವಾ ಸಮಿತಿಯು ಪಂ.ಪುಟ್ಟರಾಜರ ಮಾಸದ ನೆನಪಿಗಾಗಿ ಸಂಗೀತ ಶಿವಾನುಭವ ಪ್ರಥಮ ಕಾರ್ಯಕ್ರಮವನ್ನು ಮೇ.9ರಂದು ಸಂಜೆ 6 ಗಂಟೆಗೆ ‘ಶಿವಾಚಾರ್ಯ ನಿಕೇತನ’ ಶ್ರೀ. ಷ. ಬ್ರ. ಡಾ. ಸದ್ಯೋಜಾತ ಶಿವಾಚಾರ್ಯ ಹಿರೇಮಠ ದಾವಣಗೆರೆಯಲ್ಲಿ ಹಮ್ಮಿಕೊಂಡಿದೆ.

ಸಂಗೀತ ಶಿವಾನುಭವದ ದಿವ್ಯ ಸಾನಿಧ್ಯವನ್ನು ಶ್ರೀ ಷ. ಬ್ರ. ಓಂಕಾರ ಶಿವಾಚಾರ್ಯ ಸ್ವಾಮಿಗಳು ಪುರವರ್ಗ ಹಿರೇಮಠ ಅವರಗೊಳ್ಳ, ದಾವಣಗೆರೆ ಇವರು ವಹಿಸಿಕೊಳ್ಳುವರು. ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕರಾದ ಶ್ರೀ ವೇ. ಚನ್ನವೀರ ಸ್ವಾಮಿಗಳು ಹಿರೇಮಠ (ಕಡಣಿ) ಗದಗ ಇವರು ಸಮಾರಂಬದ ಉದ್ಘಾಟನೆ ಮಾಡುವರು. ದಾವಣಗೆರೆಯ ಶ್ರೀ ಕುಸುಮ ಶಟ್ರು, ಸಮಾಜ ಸೇವಕರಾದ ಅಣಬೇರು ಮಂಜಣ್ಣ, ಶ್ರೀ ವೀರೇಶ್ವರ ಪುಣ್ಯಾಶ್ರಮ ಕಾರ್ಯದರ್ಶಿ ಶ್ರೀ ಎ. ಎಚ್. ಶಿವಮೂರ್ತಿಸ್ವಾಮಿ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಶ್ರೀ ಪರಮೇಶ್ವರಪ್ಪ ಕೆ. ಬಿ., ಅಕ್ಕನ ಬಳಗ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ಇವರು ಆಗಮಿಸುವರು.

ಸಂಗೀತದಲ್ಲಿ ಶಿವನ ಕಂಡ ಅನುಭಾವಿಗಳು ಕುರಿತು, ಪ್ರೊ. ಎಸ್. ಸಿಧ್ದೇಶ ಕುರ್ಕಿ ಸಾಹಿತಿಗಳು ದಾವಣಗೆರೆ ಇವರು ಉಪನ್ಯಾಸ ನೀಡಲಿದ್ದಾರೆ. ರಾಜ್ಯ ಸಂಚಾಲಕರಾದ ಶ್ರೀಮತಿ ಎಂ. ಜಿ. ಶಶಿಕಲಾ ಮೂರ್ತಿ ನಲ್ಕುದರೆ, ರಾಜ್ಯಕಾರ್ಯದರ್ಶಿ, ಪ್ರೊ. ಮಂಜುಶ್ರೀ ಬ. ಹಾವಣ್ಣವರ ಬೆಳಗಾವಿ, ಉಪಸ್ಥಿತರಿರುವರು. ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ದಾವಣಗೆರೆ ಜಿಲ್ಲಾ ಸಂಚಾಲಕರಾದ ಶ್ರೀ ವೇ. ಶಿವಬಸಯ್ಯ ಚರಂತಿಮಠ (ಕಾಡಶಟ್ಟಿಹಳ್ಳಿ) ಇವರು ಅಧ್ಯಕ್ಷತೆ ವಹಿಸಿಕೊಳ್ಳುವರು. ಶ್ರೀ ಸೋಮಯ್ಯ ಹಿರೇಮಠ ಸಾ. ಬಿಳೇಬಾಳ ಇವರಿಂದ ಗಾಯನ. ಇವರಿಗೆ ಶ್ರೀ ಭಾಗ್ಯವಂತ ಕಲಬುರ್ಗಿ ಹರ‍್ಮೋನಿಯಂ ಸಾಥ, ಶ್ರೀ ಶೇಖರ ರಬಕವಿ ತಬಲಾ ಸಾಥ ನೀಡಲಿದ್ದಾರೆ. ಈ ಶಿವಾನುಭವ ಭಕ್ತಿಸೇವೆಯನ್ನು ಶ್ರೀ ಅಣಬೇರು ಮಂಜಣ್ಣ ದಾವಣಗೆರೆ ಇವರು ವಹಿಸಿಕೊಂಡಿದ್ದು ಶಿವಾನುಭವದ ನಂತರ ಮಹಾಪ್ರಸಾದವಿರುತ್ತದೆ ಎಂದು ಸೇವಾ ಸಮಿತಿ ಜಿಲಾ ಸಂಚಾಲಕ ಶಿವಬಸಯ್ಯ ಚರಂತಿಮಠ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button