Latest

ಬಿಜೆಪಿ ಮುಖಂಡನ ಆತ್ಮಹತ್ಯೆ; ಡೆತ್ ನೋಟ್ ನಲ್ಲಿದ್ದ ಸೀಕ್ರೇಟ್ ಬಹಿರಂಗ; ಕ್ಷಮೆಗೂ ನಾನು ಅರ್ಹನಲ್ಲ ಎಂದ ಅನಂತರಾಜು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದ ಬಿಜೆಪಿ ಮುಖಂಡ ಅನಂತರಾಜು ಬರೆದಿಟ್ಟಿದ್ದ ಡೆತ್ ನೋಟ್ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕಾರಣವೇನು ಎಂಬ ಸೀಕ್ರೇಟ್ ಬಯಲಾಗಿದೆ.

ಹೇರೋಹಳ್ಳಿ ವಾರ್ಡ್ ನ ಬಿಜೆಪಿ ಮುಖಂಡ ಅನಂತರಾಜು ಮೇ 12ರಂದು ಬ್ಯಾಡರಹಳ್ಳಿಯ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಪ್ರಿಯ ಪತ್ನಿ ನನ್ನನ್ನು ಕ್ಷಮಿಸಿಬಿಡು ನಿನಗೆ ಮೋಸ ಮಾಡಿದೆ ಎಂದು ಕ್ಷಮೆಯಾಚಿಸಿದ್ದಾರೆ.

ಅಲ್ಲದೇ ತಾನು ಪರಸ್ತ್ರೀ ಸಹವಾಸಕ್ಕೆ ಸಿಲುಕಿ ಬ್ಲ್ಯಾಕ್ ಮೇಲ್ ಗೆ ಒಳಗಾಗಿ ಹಣ ಕಳೆದುಕೊಂಡಿದ್ದೇನೆ. ನಿನಗೆ ಮುಖತೋರಿಸಿ, ಕ್ಷಮೆ ಕೇಳುವ ಅರ್ಹತೆಯೂ ನನಗಿಲ್ಲ. ಕೆ.ಆರ್.ಪುರದ ರೇಖಾ ಎನ್ನುವವಳು ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದಳು. ಆಕೆ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಳು. ರೇಖಾ, ಸ್ಪಂದನ, ವಿನೋದ್ ಎಂಬುವವರ ಹನಿಟ್ರ್ಯಾಪ್ ನಿಂದಾಗಿ ಎಲ್ಲಾ ಹಣ ಕಳೆದುಕೊಂಡಿದ್ದೇನೆ. ಫೋಟೋ, ವಿಡಿಯೋ ರಾಜಕೀಯ ನಾಯಕರಿಗೆ, ಮೀಡಿಯಾದವರಿಗೆ ಕೊಟ್ಟು ಮಾನ ಮರ್ಯಾದೆ ಕಳೆಯುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಇದರಿಂದ ಹಣ ಕೊಟ್ಟು ಕೊಟ್ಟು ಸಾಕಾಗಿದೆ. ಕ್ಷಮೆಗೂ ನಾನು ಅರ್ಹನಲ್ಲ ಎಂದು ಬರೆದಿಟ್ಟಿದ್ದಾರೆ.

ಈಬಾರಿಯ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದ ಬಿಜೆಪಿ ಮುಖಂಡ ಅನಂತರಾಜು ಮೇ 12ರಂದು ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದರು. ಪತ್ನಿ ಸುಮ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Home add -Advt

ದೇಶದ ಜನರಿಗಾಗಿ ನಿಮ್ಮ ಸೇವೆ ಮುಡಿಪಾಗಿರಲಿ: ವೈದ್ಯರಿಗೆ ಮುಖ್ಯಮಂತ್ರಿಗಳ ಕಿವಿಮಾತು

ಲಿಂಗಾಯಿತರು ಸಂಘಟಿತರಾಗದಿದ್ದರೆ ಭವಿಷ್ಯವಿಲ್ಲ: ಡಾ ತೋಂಟದ ಸಿದ್ಧರಾಮ ಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button