Latest

ತಾಯಿಯ ಚಿನ್ನ ಕದ್ದು ಪ್ರಿಯತಮನಿಗೆ ಕೊಟ್ಟ ಯುವತಿ; ಮಗಳ ವಿರುದ್ಧ ದೂರು ದಾಖಲಿಸಿದ ಅಮ್ಮ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮನೆಯಲ್ಲಿ ತಾಯಿಯ ಬಂಗಾರವನ್ನೇ ಕದ್ದು ಪ್ರಿಯತಮನಿಗೆ ಕೊಟ್ಟು, ಅದೇ ಜಾಗದಲ್ಲಿ ರೋಲ್ ಗೋಲ್ಡ್ ಒಡವೆಗಳನ್ನು ತಂದಿಟ್ಟಿದ್ದ ಮಗಳ ವಿರುದ್ಧ ತಾಯಿ  ಪೊಲೀಸರಿಗೆ ದೂರು ನೀಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.

ತಾಯಿಯ ಒಂದು ಕೆ.ಜಿ ಚಿನ್ನಾಭರಣವನ್ನೆ ಕದ್ದ ಮಗಳು ದೀಪ್ತಿ ಎಲ್ಲಾ ಒಡವೆಗಳನ್ನು ಪ್ರಿಯತಮ ಮದನ್ ಗೆ ಕೊಟ್ಟು ಆತನೊಂದಿಗೆ ಮೋಜುಮಸ್ತಿ ಮಾಡಿದ್ದಾಳೆ. ತಾಯಿ ಮನೆಯಲ್ಲಿ ಇಟ್ಟಿದ್ದ ಒಡವೆಗಳ ಜಾಗದಲ್ಲಿ ನಕಲಿ ಚಿನ್ನ ತಂದು ಇಟ್ಟಿದ್ದಾಳೆ. ಆಭರಣಗಳನ್ನು ನೋಡಿದಾಗ ಅನುಮಾನಗೊಂಡ ತಾಯಿ ಮಗಳನ್ನು ಕೇಳಿದ್ದಾಳೆ. ಆದರೆ ಉತ್ತರ ಸಿಕ್ಕಿಲ್ಲ. ಇದರಿಂದ ಬೇಸರಗೊಂಡ ತಾಯಿ ಮಗಳ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Home add -Advt

ಮಗಳು ದೀಪ್ತಿ ಹಾಗೂ ಆಕೆಯ ಪ್ರಿಯತಮ ಮದನ್ ಇಬ್ಬರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಗಳು ತಾನೇ ಚಿನ್ನ ಕದ್ದಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಜಕ್ಕೂರು ಲೇಔಟ್ ನಿವಾಸಿಯಾಗಿದ್ದ ದೀಪ್ತಿ ಪತಿಗೆ ವಿಚ್ಛೇದನ ನೀಡಿ ಬಳಿಕ ತಾಯಿಯೊಂದಿಗೆ ವಾಸವಾಗಿದ್ದಳು. ಈ ವೇಳೆ ಡ್ರೈವಿಂಗ್ ಸ್ಕೂಲ್ ಚಾಲಕನಾಗಿದ್ದ ಮದನ್ ಎಂಬಾತನ ಪರಿಚಯವಾಗಿ ಆತನೊಂದಿಗೆ ಸುತ್ತಾಟ ನಡೆಸಿದ್ದಾಳೆ. ಮದನ್ ಗೆ ಅದಾಗಲೇ ವಿವಾಹವಾಗಿ ಇಬ್ಬರು ಮಕ್ಕಳಿದ್ದರೂ ವಿಚ್ಛೇದಿತ ಮಹಿಳೆಯೊಂದಿಗೆ ಲವ್ವಿಡವ್ವಿ ಆರಂಭಿಸಿದ್ದಾನೆ. ಮೋಜು ಮಸ್ತಿಗಾಗಿ ದೀಪ್ತಿ ತಾಯಿಯ ಒಡವೆಯನ್ನೇ ಕದ್ದು ಪ್ರಿಯತಮನಿಗೆ ಕೊಟ್ಟಿದ್ದಾಳೆ. ಈ ಬಗ್ಗೆ ಪೊಲೀಸರ ಎದುರು ದೀಪ್ತಿ ಬಾಯ್ಬಿಟ್ಟಿದ್ದಾಗಿ ತಿಳಿದುಬಂದಿದೆ.
ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂಗೆ CBI ಶಾಕ್

Related Articles

Back to top button