Latest

ವಕೀಲೆ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಬಾಗಲಕೋಟೆಯ ಕೆರೊಡಿ ಆಸ್ಪತ್ರೆ ಬಡಾವಣೆಯಲ್ಲಿ ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹಲ್ಲೆಗೂ ಮೊದಲು ಗಿಫ್ಟ್ ಸೆಂಟರ್ ಮಾಲೀಕ ಮಹಾಂತೇಶ್ ಮೇಲೆ ಸಂಗೀತಾ ಚಪ್ಪಲಿಯಿಂದ ಹೊಡೆದಿದ್ದರು ಎಂಬ ಸಂಗತಿ ಬಹಿರಂಗವಾಗಿದೆ.

ಮೇ 14ರಂದು ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಮಹಾಂತೇಶ್ ಚೊಳಚಗುಡ್ಡ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅಂಗಡಿಯ ಮುಂದೆ ನಡು ರಸ್ತೆಯಲ್ಲಿಯೇ ವಕಿಲೆಯನ್ನು ಕಾಲಿನಿಂದ ಒದ್ದಿದ್ದರಲ್ಲದೇ ಕಪಾಳ ಮೋಕ್ಷ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೇ ಮಹಾಂತೇಶ್ ತನ್ನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮನಬಂದಂತೆ ಥಳಿಸಿ, ಒದ್ದಿದ್ದಾರೆ. ತನ್ನ ಪತಿ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

ಇದೀಗ ಮೇ 14ರಂದು ಸಂಗೀತಾ ಮೇಲೆ ಹಲ್ಲೆ ನಡೆಯುವ ಮುನ್ನ ಸಂಗೀತಾ ತನ್ನ ಪತಿ ನವೀನ್ ಜತೆ ಬಂದು ವೀರಭದ್ರೇಶ್ವರ ಗಿಫ್ಟ್ ಸೆಂಟರ್ ಮಾಲೀಕ ಮಹಾಂತೇಶ್ ಚೊಳಚಗುಡ್ಡ ಅವರನ್ನು ಅವಾಚ್ಯಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹೊಡೆದಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ಮಹಾಂತೇಶ್ ಸಂಗೀತಾ ಮೇಲೆ ಹಲ್ಲೆ ನಡೆಸಿದ್ದಾರೆ. ಇದೀಗ ಸಂಗೀತಾ ನಡೆಸಿರುವ ಹಲ್ಲೆ ವಿಡಿಯೋ ಕೂಡ ವೈರಲ್ ಆಗಿದೆ.

ಪೊಲೀಸರಿಗೆ ಮನೆ ತೋರಿಸಿದರು ಎಂಬ ಕಾರಣಕ್ಕೆ ಪಕ್ಕದ ಮನೆಯವರ ಜತೆ ವಕೀಲೆ ಸಂಗೀತಾ ಜಗಳವಾಡಿದ್ದರು. ಇದೇ ವಿಚಾರವಾಗಿ ವಕೀಲೆ, ಕುಟುಂಬಸ್ಥರು ಹಾಗೂ ಇನ್ನೋರ್ವ ವ್ಯಕ್ತಿ ಮಧ್ಯೆ ಮಾರಾಮರಿ ನಡೆದಿದೆ. ಈ ವೇಳೆ ವಕೀಲೆ ಮೇಲೆ ಹಲ್ಲೆ ನಡೆದಿದೆ.
ತಾಯಿಯ ಚಿನ್ನ ಕದ್ದು ಪ್ರಿಯತಮನಿಗೆ ಕೊಟ್ಟ ಯುವತಿ; ಮಗಳ ವಿರುದ್ಧ ದೂರು ದಾಖಲಿಸಿದ ಅಮ್ಮ

Related Articles

Back to top button