Latest

ರೂಪಾ ಅವರಿಗೆ 75 ಬಾರಿ ನಾನು ನೋಟೀಸ್ ನೀಡಿದ್ದೇನೆ; ಬೇಳೂರು ರಾಘವೇಂದ್ರ ಶೆಟ್ಟಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ನನ್ನ ವಿರುದ್ಧ ರೂಪಾ ಮೌದ್ಗಿಲ್ ಮಾಡಿರುವ ಆರೋಪಕ್ಕೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಕರಕುಶಲ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಸವಾಲು ಹಾಕಿದ್ದಾರೆ.

ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ರಾಘವೇಂದ್ರ ಶೆಟ್ಟಿ, ನಾನು ಕೆಲ ದಾಖಲೆಗಳನ್ನು ಸಲ್ಲಿಸಿದ್ದೇನೆ. ಅಧಿಕಾರಿಯೊಬ್ಬರ ಮರು ನೇಮಕ್ಕೆ 5 ಕೋಟಿ ರೂಪಾಯಿ ಡೀಲ್ ಮಾಡಿಕೊಂಡಿದ್ದಾರೆ ಎಂದು ನನ್ನ ವಿರುದ್ಧ ಎಂ.ಡಿ ರೂಪಾ ಮೌದ್ಗಿಲ್ ಆರೋಪಗಳು ಸುಳ್ಳು. ಇಂತಹ ಅನಗತ್ಯ ಆರೋಪ ಅವರಿಗೆ ಶೋಭೆ ತರಲ್ಲ ಎಂದು ಹೇಳಿದರು.

Home add -Advt

ಶ್ರೀಕಾಂತ್ ಎಂಬ ಆಪ್ತ ಸಹಾಯಕ ನನ್ನ ಬಳಿ ಬಂದಿದ್ದು ನಿಜ. ಆರೋಪ ಕೇಳಿಬಂದ ಕೂಡಲೇ ಆತನನ್ನು ಕೆಲಸದಿಂದ ವಜಾ ಮಾಡಿದ್ದೇನೆ. ಪೊಲೀಸರು ಆತ ನಿರಪರಾಧಿ ಎಂದು ಬಿಟ್ಟು ಕಳುಹಿಸಿದಾರೆ. ನನ್ನ ವಿರುದ್ಧ ರೂಪಾ ಮಾಡುತ್ತಿರುವುದು ವೃಥಾ ಆರೋಪ. ಇದು ಕರಕುಶಲ ಅಭಿವೃದ್ಧಿ ನಿಗಮದ ಗೌರವದ ವಿಚಾರ. ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂತಹ ಆರೋಪ ಮಾಡಿದ್ದಾರೆ. ಈವರೆಗೆ ರೂಪಾ ಅವರಿಗೆ 75 ಬಾರಿ ನಾನು ನೋಟೀಸ್ ನೀಡಿದ್ದೇನೆ. ಯಾವುದಕ್ಕೂ ಉತ್ತರಿಸಿಲ್ಲ. ಈಗ ಅವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಗುಡುಗಿದರು.

ಇವರು ಎರಡು ದಿನಕ್ಕೊಮ್ಮೆ ಕಚೇರಿಗೆ ಬರುತ್ತಾರೆ. ಮನೆಗೆ ಫೈಲ್ ತರಿಸಿಕೊಂಡು ಮನೆಯಲ್ಲಿಯೇ ಕೆಲಸ ಮಾಡುತ್ತಾರೆ. ಸರ್ಕಾರಿ ವಾಹನದಲ್ಲಿ ಒಂದು ಮನೆಯ ಬಳಕೆಗೆ ಮತ್ತೊಂದು ವೈಯಕ್ತಿಕ ಬಳಕೆಗೆ ಉಪಯೋಗಿಸುತ್ತಿದ್ದಾರೆ. ನನ್ನ ಕಚೇರಿಯಲಿದ್ದ ಸಿಸಿಟಿವಿ ಕನೆಕ್ಷನ್ ಕಟ್ ಮಾಡಿದ್ದಾರೆ. ಓರ್ವ ಐಪಿಎಸ್ ಅಧಿಕಾರಿಯಾಗಿದ್ದವರು ಇಂತಹ ಸಣ್ಣ ಮಟ್ಟಕ್ಕೆ ಇಳಿದಿರುವುದು ದುರಂತ ಎಂದು ಹೇಳಿದ್ದಾರೆ.

ಬ್ಯಾಂಕ್ ಮ್ಯಾನೇಜರ್ ಗೆ ಗುಂಡಿಟ್ಟು ಹತ್ಯೆ

Related Articles

Back to top button