Latest

ಯಲ್ಲಾಪುರ-ಶಿರಸಿ ಅರಣ್ಯ ಸೇರಿ ಕರಾವಳಿ ಜಿಲ್ಲೆಯ 4 ಕಡೆಗಳಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಆಕ್ಟೀವ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರಾವಳಿ ಜಿಲ್ಲೆಯ ನಾಲ್ಕು ಪ್ರದೇಶಗಳಲ್ಲಿ ಮತ್ತೆ ನಿಷೇಧಿತ ಸ್ಯಾಟಲೈಟ್ ಫೋನ್ ಆಕ್ಟೀವ್ ಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಬೇಹುಗಾರಿಕಾ ಏಜೆನ್ಸಿ ಸ್ಯಾಟಲೈಟ್ ಫೋನ್ ಲೊಕೇಷನ್ ಗಳನ್ನು ಪತ್ತೆ ಮಾಡಿದ್ದು, ನಾಲ್ಕು ಅರಣ್ಯ ಪ್ರದೇಶಗಳಿಂದ ವ್ಯಕ್ತಿಗಳು ಸ್ಯಾಟಲೈಟ್ ಫೋನ್ ಸಂಪರ್ಕ ಸಾಧಿಸಿದ್ದಾರೆ ಎಂದು ತಿಳಿಸಿದೆ.

Home add -Advt

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ-ಶಿರಸಿ ಮಧ್ಯೆ ಇರುವ ಅರಣ್ಯ, ಮಂಗಳೂರು ಹೊರ ಭಾಗದಲ್ಲಿರುವ ನಾಟಿಕಲ್, ಕುಳಾಯಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೀರೂರು ನಡುವಿನ ಅರಣ್ಯ ಸೇರಿದಂತೆ ಒಟ್ಟು ನಾಲ್ಕು ಸ್ಥಳಗಳಿಂದ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿದ್ದಾರೆ.

ಮೇ 23ರಿಂದ 29ರವರೆಗೆ ನಾಲ್ಕು ಪ್ರದೇಶಗಳಲ್ಲಿ ಫೋನ್ ಆಕ್ಟೀವ್ ಆಗಿದ್ದು, 6 ದಿನಗಳ ಅವಧಿಯಲ್ಲಿ ನಾಲ್ಕು ಕಡೆಗಳಲ್ಲಿ ವ್ಯಕ್ತಿಗಳು ಸ್ಯಾಟಲೈಟ್ ಫೋನ್ ಸಂಪರ್ಕ ಸಾಧಿಸಿದ್ದಾರೆ ಎಂದು ಬೇಹುಗಾರಿಕಾ ಏಜೆನ್ಸಿ ಫೋನ್ ಲೊಕೇಷನ್ ಟ್ರೇಸ್ ಮಾಡಿದೆ.
ಕಂಟೈನರ್ ಡಿಪೋದಲ್ಲಿ ಅಗ್ನಿ ದುರಂತ; 16 ಜನರು ಸಜೀವ ದಹನ

Related Articles

Back to top button