Latest

ಊಟದಲ್ಲಿ ವಿಷ ಬೆರಸಿ ಪತ್ನಿ ಮಕ್ಕಳಿಗೆ ಕೊಟ್ಟ ವ್ಯಕ್ತಿ; ಮಗು ದುರ್ಮರಣ

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಜಮೀನು ಮಾರಲು ಪತ್ನಿ ಒಪ್ಪದ ಕಾರಣಕ್ಕೆ ಹೆಂಡತಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನೇ ಕೊಲ್ಲಲು ವ್ಯಕ್ತಿ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ.

ಚಂದ್ರಶೇಖರ್ ಎಂಬಾತ ವಿಪರೀತ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಜಮೀನು ಮಾರಲು ತೀರ್ಮಾನಿಸಿದ್ದ. ಆದರೆ ಪತ್ನಿ ಇದಕ್ಕೆ ಒಪ್ಪಿರಲಿಲ್ಲ. ಇದರಿಂದ ಸದಾ ಮನೆಯಲ್ಲಿ ಜಗಳವಾಗುತ್ತಿತ್ತು. ಜಮೀನು ಮಾರಲು ಪತ್ನಿ ಒಪ್ಪುತ್ತಿಲ್ಲ ಎಂದು ಪತ್ನಿ ಹಾಗೂ ಮಕ್ಕಳನ್ನು ಹತ್ಯೆ ಮಾಡಲು ನಿರ್ಧರಿಸಿದ್ದಾನೆ.

ಎಗ್ ರೈಸ್ ನಲ್ಲಿ ವಿಷಬೆರಸಿ ಪತ್ನಿ ಸಾವಿತ್ರಿ ಹಾಗೂ ಇಬ್ಬರು ಮಕ್ಕಳಿಗೆ ಕೊಟ್ಟಿದ್ದಾನೆ. ಎರಡುವರೆ ವರ್ಷದ ಮಗು ಶಿವರಾಜ್ ಸಾವನ್ನಪ್ಪಿದೆ. 5 ವರ್ಷದ ಮಗಳು ರೇಣುಕಾ ಹಾಗೂ ಸಾವಿತ್ರಿ ತೀವ್ರ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ್ ಅದಾಖಲಾಗಿದೆ.
ಪಠ್ಯ ಪುಸ್ತಕ ಮರು ಮುದ್ರಣವಾದರೆ 153 ಕೋಟಿ ಹೊರೆ! ಸಾರ್ವಜನಿಕ ಹಣ ವ್ಯರ್ಥಕ್ಕೆ ಯಾರು ಹೊಣೆ?

Related Articles

Back to top button