Latest

ಸಚಿವ ಸತ್ಯೇಂದ್ರ ಜೈನ್ ನ್ಯಾಯಾಂಗ ಬಂಧನಕ್ಕೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಇಡಿಯಿಂದ ಬಂಧನಕ್ಕೀಡಾಗಿದ್ದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸತ್ಯೇಂದ್ರ ಜೈನ್ ಅವರ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಅವರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ದೆಹಲಿಯ ಅವೆನ್ಯೂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.

Home add -Advt

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದ ಹಿಂದೆ ಇಡಿ ಅಧಿಕಾರಿಗಳು ಸತ್ಯೇಂದ್ರ ಜೈನ್ ಅವರ ನಿವಾಸ ಸೇರಿ ಒಟ್ಟು 7 ಕಡೆ ಶೋಧ ನಡೆಸಿದ್ದರು. ಈ ವೇಳೆ 2.85 ಕೋಟಿ ರೂ ನಗದು, 133 ಚಿನ್ನದ ನಾಣ್ಯಗಳನ್ನು ವಶಕ್ಕೆ ಪಡೆದಿದ್ದರು.
ಪ್ರಿಯಾಂಕಾ ಗಾಂಧಿ ಪೊಲೀಸರ ವಶಕ್ಕೆ

Related Articles

Back to top button