ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಧಾನ ಪರಿಷತ್ತಿನ ವಾಯವ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ಮುಕ್ತಾಯವಾಗಿದೆ.
ಚಲಾಯಿತ 65,922 ಮತಗಳ ಪೈಕಿ 56,916 ಮತಗಳು ಸ್ವೀಕೃತವಾಗಿದ್ದು, 9006 ಮತಗಳು ತಿರಸ್ಕೃತಗೊಂಡಿವೆ.
ಹನುಮಂತ ನಿರಾಣಿ 34,693 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಬಿಜೆಪಿಯ ಹನುಮಂತ ನಿರಾಣಿ 44,815 ಮತಗಳನ್ನು ಪಡೆದಿದ್ದು, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಸುನೀಲ ಸಂಕ ಅವರು 10,122 ಮತಗಳನ್ನು ಪಡೆದಿದ್ದಾರೆ. 3ನೇ ಸ್ಥಾನದಲ್ಲಿರುವ ದೀಪಿಕಾ ಎಸ್ 453 ಮತ ಪಡೆದಿದ್ದಾರೆ. ಜಿ.ಸಿ.ಪಾಟೀಲ 194, ಯಲ್ಲಪ್ಪ ಮಹಾದೇವಪ್ಪ ಕಲಕುತ್ರಿ 221 ಮತ, ಆದರ್ಶ ಕುಮಾರ ಸಿದ್ದಯ್ಯ ಪೂಜಾರಿ 370, ಗಟಿಗೆಪ್ಪ ಮಲ್ಲಪ್ಪ ಮಗದುಂ 68, ಬಜಂತ್ರಿ ನಿಂಗಪ್ಪ ಮಾರುತ್ 167, ಬಾಗಿ ಭೀಮಸೇನ್ ಬಾಳಪ್ಪ 168, ಸುಭಾಷ್ ರಂಗಪ್ಪ ಕೋಟೆಕಲ್ 166 ಹಾಗೂ ಆರ್ ಆರ್ ಪಾಟೀಲ 172 ಮತಗಳನ್ನು ಪಡೆದಿದ್ದಾರೆ.
ಪರಿಷತ್ ಚುನಾವಣೆ: ಹೊರಟ್ಟಿ, ಹುಕ್ಕೇರಿ, ನಿರಾಣಿ ಗೆಲುವು; ಸಮಗ್ರ ಮಾಹಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ