
ಪ್ರಗತಿವಾಹಿನಿ ಸುದ್ದಿ; ಮುಂಬೈ: ಕೇವಲ ಮೂರೇ ತಿಂಗಳಲ್ಲಿ ಡಿ-ಮಾರ್ಟ್ ಸಂಸ್ಥೆ ಮಾಲೀಕ, ಪ್ರಮುಖ ಷೇರು ಹೂಡಿಕೆದಾರ ರಾಧಾಕಿಶನ್ ದಮಾನಿ ಆಸ್ತಿ ಕುಸಿತಕಂಡಿದ್ದು, ಡಿಮಾರ್ಟ್ ಉದ್ಯಮದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆ ಎದುರಾಗಿದೆ.
ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದಮಾನಿ ಸುಮಾರು 26,000 ಕೋಟಿ ನಷ್ಟ ಅನುಭವಿಸಿದ್ದಾರೆ. 1,73,822 ಕೋಟಿ ರೂ ಇದ್ದ ದಮಾನಿ ಆಸ್ತಿ 1,47,534.47 ಕೋಟಿ ರೂಪಾಯಿಗೆ ಇಳಿದಿದೆ.
ಜೂನ್ 2021ರ ತ್ರೈಮಾಸಿಕದಲ್ಲಿಯೇ ದಮಾನಿ ಆಸ್ತಿ ಶೇ.14ರಷ್ಟು ಕುಸಿದಿದೆ ಎಂದು ಟ್ರೆಂಡ್ ಲೈನ್ ಹಾಗೂ ಕಾರ್ಪೊರೇಟ್ ಡೇಟಾಬೇಸ್ ಈಸ್ ಈಕ್ವಿಟಿಯ ಅಂಕಿ-ಅಂಶಗಳು ತಿಳಿಸಿವೆ.
ಪ್ರಮುಖವಾಗಿ ಡಿ-ಮಾರ್ಟ್ ಸೂಪರ್ ಮಾರ್ಕೆಟ್ಗಳನ್ನು ನಡೆಸುವ ಅವೆನ್ಯೂ ಸೂಪರ್ಮಾರ್ಟ್ಸ್ ದಮಾನಿ ಹೂಡಿಕೆಯ ಪ್ರಮುಖ ಕಂಪನಿಯಾಗಿದ್ದು, ಇದರಲ್ಲಿ ಮಾಲೀಕರಾಗಿ ಅವರು ಶೇ. 65.2 ಪಾಲನ್ನು ಹೊಂದಿದ್ದಾರೆ. ಇದೊಂದೇ ಷೇರಿನಿಂದ ಅವರು ಭಾರೀ ನಷ್ಟ ಅನುಭವಿಸಿದ್ದಾರೆ. ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಯಲ್ಲಿ ಅವೆನ್ಯೂ ಸೂಪರ್ಮಾರ್ಟ್ಸ್ ಷೇರುಗಳು ಶೇ. 15ಕ್ಕಿಂತ ಹೆಚ್ಚು ಕುಸಿದು 3,999.45 ರೂ.ನಿಂದ 3,396.3 ರೂ.ಗೆ ತಲುಪಿವೆ. ಇದರಿಂದ ರಾಧಾಕಿಶನ್ ದಮಾನಿ ಸುಮಾರು 25,462.52 ಕೋಟಿ ರೂ. ನಷ್ಟ ಅನುಭವಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಸುಂದರಂ ಫೈನಾನ್ಸ್, ಮಂಗಳಂ ಆರ್ಗಾನಿಕ್ಸ್, ಯುನೈಟೆಡ್ ಬ್ರೇವರೀಸ್, ವಿಎಸ್ಟಿ ಇಂಡಸ್ಟ್ರೀಸ್,ಮೆಟ್ರೊಪೊಲಿಸ್ ಹೆಲ್ತ್ಕೇರ್, ಅಸ್ಟ್ರಾ ಮೈಕ್ರೋವೇವ್ ಪ್ರಾಡಕ್ಟ್ಸ್ ಮತ್ತು ಬಿಎಫ್ ಯುಟಿಲಿಟೀಸ್ ಸೇರಿದಂತೆ ದಮಾನಿ ಹೂಡಿಕೆಯ ಇತರ ಕಂಪನಿಗಳ ಷೇರುಗಳು ಜೂನ್ 2022 ತ್ರೈಮಾಸಿಕದಲ್ಲಿ ಶೇ. 38ರಷ್ಟು ಕುಸಿತ ಕಂಡಿದೆ. ಇದೇ ವೇಳೆ 14 ಷೇರುಗಳಲ್ಲಿ ಕಂಪನಿ ಷೇರುಗಳು ಏರಿಕೆಕಂಡಿದ್ದು, ಆಂಧ್ರ ಪೇಪರ್, ಸುಂದರಂ ಫೈನಾನ್ಸ್ ಹೋಲ್ಡಿಂಗ್ಸ್, ಬ್ಲೂ ಡಾರ್ಟ್ ಎಕ್ಸ್ಪ್ರೆಸ್ ಮತ್ತು 3ಎಂ ಇಂಡಿಯಾ ಇವುಗಳ ಷೇರುಗಳು ದಮಾನಿ ಆಸ್ತಿಯನ್ನು 70.6 ಕೋಟಿ ರೂ. ಏರಿಕೆ ಮಾಡಿವೆ.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ