Kannada News

ಎರಡು ಬೈಕ್ ಗಳ ಡಿಕ್ಕಿ; ಒಬ್ಬ ಸಾವು, ಇನ್ನೊಬ್ಬನಿಗೆ ಗಂಭೀರ ಗಾಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲಾರಿಗೆ ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ ಸವಾರನೊಬ್ಬ ಇನ್ನೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಮೃತಪಟ್ಟಿದ್ದು ಇನ್ನೊಬ್ಬ ಗಂಭೀರ ಗಾಯಗೊಂಡಿದ್ದಾನೆ.

ಅಥಣಿ ತಾಲೂಕಿನ ಕಟಗೇರಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.  ಅಥಣಿಯ ಕುಮಾರ ಸಿದ್ದಪ್ಪ ಮೇತ್ರಿ  (28 ) ಮೃತಪಟ್ಟವ.

ಆರೋಪಿ ಸಿದ್ಧಾರ್ಥ ಅಪ್ಪಣ್ಣ ಮಾಳಿ ಎಂಬಾತ  ಕಟಗೇರಿಯಿಂದ ಅಥಣಿ ಕಡೆ ಅತಿವೇಗದಲ್ಲಿ ಬೈಕ್ ಚಲಾಯಿಸಿಕೊಂಡು ಲಾರಿಯೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ  ಬರುತ್ತಿದ್ದ  ಮುತ್ತಪ್ಪ ನಾಗಪ್ಪ ಯಂಕಚ್ಚಿ ಎಂಬುವವರ ಬೈಕ್ ಗೆ ಡಿಕ್ಕಿಹೊಡೆದಿದ್ದಾನೆ.  ಮುತ್ತಪ್ಪ ಅವರ ಬೈಕ್ ನ ಹಿಂಬದಿ ಸೀಟಿನ ಸವಾರ  ಕುಮಾರ  ಅವರ ತಲೆ ಹಾಗೂ ಮುಖಕ್ಕೆ ತೀವ್ರ ಏಟುಗಳಾಗಿ ಅವರು ಮೃತಪಟ್ಟಿದ್ದಾರೆ. ಮುತ್ತಪ್ಪ ಅವರ ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. 

ಈ ಕುರಿತು ದುಂಡವ್ವ ಕುಮಾರ ಮೇತ್ರಿ ಅವರು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತನಿಖೆ ಮುಂದುವರಿದಿದೆ.

ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button