Latest

ಅಮರನಾಥ್ ಗುಹೆ ಬಳಿ ಮೇಘಸ್ಫೋಟ; ಏಕಾಏಕಿ ಭಾರಿ ಪ್ರವಾಹ; ಇಬ್ಬರ ಸಾವು

ಪ್ರಗತಿವಾಹಿನಿ ಸುದ್ದಿ; ಅಮರನಾಥ್: ಅಮರನಾಥ್ ಗುಹೆ ಬಳಿ ಮೇಘಸ್ಫೋಟ ಸಂಭವಿಸಿದ್ದು, ಇದ್ದಕ್ಕಿದ್ದಂತೆ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪವಿತ್ರ ಯಾತ್ರಾಸ್ಥಳ ಅಮರನಾಥ ಯಾತ್ರೆ ಸಾವಿರಾರು ಜನರು ತೆರಳಿದ್ದು, ಮೇಘಸ್ಫೋಟದಿಂದ ಸಂಭವಿಸಿರುವ ಫ್ಲ್ಯಾಶ್ ಫ್ಲಡ್ ಗೆ ಯಾತ್ರಾರ್ಥಿಗಳು ತಂಗಲು ನಿರ್ಮಿಸಿಕೊಂಡಿದ್ದ ನೂರಾರು ಟೆಂಟ್ ಗಳು, ಲಂಗರ್ ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. 15, 000 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Home add -Advt

ಬೆಟ್ಟ ಪ್ರದೇಶಗಳಿಂದ ಜಲಪಾತದಂತೆ ಪ್ರವಾಹ ಬೋರ್ಗರೆಯಲು ಪ್ರಾರಂಭಿಸಿದ್ದು, ಯಾತ್ರಾರ್ಥಿಗಳು ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ. ಮತ್ತೊಂದೆಡೆ ಯಾತ್ರಾರ್ಥಿಗಳ ರಕ್ಷಣೆಗಾಗಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ.
13 ಜಿಲ್ಲೆಗಳಲ್ಲಿ ಪ್ರವಾಹ; 12 ಜನರ ಸಾವು; ಮನೆಹಾನಿಯಾದವರಿಗೆ ತಕ್ಷಣ ಪರಿಹಾರ ನೀಡಲು ಸೂಚಿಸಿದ ಸಿಎಂ

Related Articles

Back to top button