ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಅಮರನಾಥ ಯಾತ್ರೆಗೆ ತೆರಳಿದ್ದ ಚಿಕ್ಕೋಡಿ ತಾಲೂಕಿನ ಮಾಂಜರಿಯ 8 ಜನರು ಸುರಕ್ಷಿತವಾಗಿದ್ದಾರೆ. ಅವರೆಲ್ಲ ದೆಹಲಿ ತಲುಪಿದ್ದಾರೆ.
ಮಾಜಂರಿಯ ದೀಪಕ್ ಪವಾರ ಮತ್ತು 7 ಜವರ ತಂಡ ಅಮರನಾಥ ಯಾತ್ರೆಗೆ ತೆರಳಿತ್ತು. ಮೇಘ ಸ್ಫೋಟದ ಹಿನ್ನೆಲೆಯಲ್ಲಿ ಇವರ ಸುರಕ್ಷತೆಯ ಬಗ್ಗೆ ಆತಂಕ ಉಂಟಾಗಿತ್ತು.
ಇದೀಗ ಅವರೆಲ್ಲ ದೆಹಲಿ ತಲುಪಿದ್ದು, ಪುಣೆ ಮಾರ್ಗವಾಗಿ ಭಾನುವಾರ ಮುಂಜಾನೆ ಮಾಂಜರಿಗೆ ತಲುಪಲಿದ್ದಾರೆ ಎಂದು ಅಂಕಲಿ ಪೊಲೀಸ್ ಠಾಣೆಯ ಪಿಎಸ್ಐ ತಿಳಿಸಿದ್ದಾರೆ.
ಈ ಮಧ್ಯೆ, ಬೆಳಗಾವಿಯ ಮಹಿಳೆ ಸಂಪರ್ಕಕ್ಕೆ ಸಿಕ್ಕಿದ್ದು, ಸುರಕ್ಷಿತವಾಗಿದ್ದಾರೆ ಎಂದು ಗೊತ್ತಾಗಿದೆ.
ಅಮರನಾಥ್ ಗುಹೆ ಬಳಿ ಮೇಘಸ್ಫೋಟ; ಏಕಾಏಕಿ ಭಾರಿ ಪ್ರವಾಹ; ಇಬ್ಬರ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ