
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ನಡುವೆಯೇ ಇದೀಗ ಶಾಲಾ ಮಕ್ಕಳಲ್ಲಿ ಹೊಸ ರೋಗ ಪತ್ತೆಯಾಗುತ್ತಿವೆ. ಮಕ್ಕಳಿಂದ ಮಕ್ಕಳಿಗೆ ಹರಡುವ ರೋಗ ಇದಾಗಿದ್ದು, ಪೋಷಕರು ಆತಂಕಕ್ಕೀಡಾಗಿದ್ದಾರೆ.
ಶಾಲಾ ಮಕ್ಕಳಲ್ಲಿ ಕೈ, ಕಾಲು ಹಾಗೂ ಬಾಯಿ ರೋಗಗಳು ಕಂಡುಬರುತ್ತಿವೆ. ಮಕ್ಕಳಿಗೆ ಕೈ ಕಾಲು, ಬಾಯಿ ಸುತ್ತಮುತ್ತ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಮಕ್ಕಳು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ.
15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕೋವಿಡ್ ನಡುವೆ ಇದೀಗ ಮಕ್ಕಳಲ್ಲಿ ಕಂಡುಬರುತ್ತಿರುವ ಹೊಸ ರೋಗ ಆತಂಕಕ್ಕೆ ಕಾರಣವಾಗಿದೆ.
ಮಕ್ಕಳಲ್ಲಿ ಕಂಡುಬರುತ್ತಿರುವ ಕಾಲು ಬಾಯಿ ರೋಗದಿಂದಾಗಿ ಎಚ್ಚರಿಕೆ ವಹಿಸುವಂತೆ ರಾಜಧಾನಿ ಬೆಂಗಳೂರಿನ ಶಾಲಾ ಮಕ್ಕಳಿಗೆ ಸೂಚಿಸಲಾಗಿದೆ.