
ಪ್ರಗತಿವಾಹಿನಿ ಸುದ್ದಿ; ರಾಂಚಿ: ಭೀಕರ ದೋಣಿ ದುರಂತದಲ್ಲಿ ಒಂದೇ ಕುಟುಂಬದ 8 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್ ನ ಕೊಡೆರ್ಮಾ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಪಂಚ್ ಖೇರ್ ಆಣೆಕಟ್ಟೆ ವೀಕ್ಷಣೆಗೆಂದು ತೆರಳಿದ್ದ ಕುಟುಂಬ ದೋಣಿ ವಿಹಾರಕ್ಕೆ ತೆರಳಿತ್ತು. ಈ ವೇಳೆ ದುರಂತ ಸಂಭವಿಸಿದ್ದು, ನೀರಿನಲ್ಲಿ ದೋಣಿ ಪಲ್ಟಿಯಾಗಿದೆ. 8 ಜನರು ಜಲಸಮಾಧಿಯಾಗಿದ್ದಾರೆ.
ಮೃತರನ್ನು ಶಿವಂ ಸಿಂಗ್, ಪಾಲಕ್ ಕುಮಾರ್, ಸೀತಾರಾಂ ಯಾದವ್, ಸೇಜತ್ ಕುಮಾರಿ, ಹರ್ಷಲ್ ಕುಮಾರ್, ಭಾವುವಾ, ರಾಹುಲ್ ಕುಮಾರ್ ಹಾಗು ಅಮಿತ್ ಕುಮಾರ್ ಎಂದು ಗುರುತಿಸಲಾಗಿದೆ. ಮೃತರು ಒಂದೇ ಕುಟುಂಬದವರು ಎಂದು ತಿಳಿದುಬಂದಿದೆ.
ನರ್ಮದಾ ನದಿಗೆ ಉರುಳಿ ಬಿದ್ದ ಬಸ್; 13 ಪ್ರಯಾಣಿಕರ ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ