Kannada NewsLatest

ವಿದ್ಯಾವತಿ ಭಜಂತ್ರಿ ಸಹಿತ ಮೂವರಿಗೆ ಪದೋನ್ನತಿ

ಪ್ರಗತಿವಾಹಿನಿ ನ್ಯೂಸ್, ಬೆಳಗಾವಿ: ಇಲ್ಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾಗಿದ್ದ ವಿದ್ಯಾವತಿ ಭಜಂತ್ರಿ ಅವರಿಗೆ ಉಪನಿರ್ದೇಶಕರ (ಕಿರಿಯ ಶ್ರೇಣಿ) ಹುದ್ದೆಗೆ ಪದೋನ್ನತಿ ನೀಡಲಾಗಿದೆ.

ಇವರು ಕಿರಣ ಸಿಂಗ್ ಅವರಿಂದ ತೆರವಾದ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಹುದ್ದೆಗೆ ನಿಯೋಜನೆಗೊಂಡಿದ್ದು ತಕ್ಷಣವೇ ಈ ಹುದ್ದೆಗೆ ವರದಿ ಮಾಡಿಕೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.

Home add -Advt

ವಿದ್ಯಾವತಿ ಭಜಂತ್ರಿ ಅವರ ಪದೋನ್ನತಿಯಿಂದ ತೆರವಾದ ಸಹಾಯಕ ನಿರ್ದೇಶಕರ ಹುದ್ದೆಗೆ ಗದಗ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ವೀರಯ್ಯಸ್ವಾಮಿ ಅವರು ಪ್ರಭಾರ ವಹಿಸಿಕೊಳ್ಳಲಿದ್ದಾರೆ.

ಿದೇ ವೇಳೆ ಹಾವೇರಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾಗಿದ್ದ ಶಶಿಕಲಾ ಹುಡೇದ ಅವರನ್ನು ಧಾರವಾಡ ರಂಗಾಯಣದ ನಿರ್ದೇಶಕರ ಹುದ್ದೆಗೆ ಹಾಗೂ ಜಗದೀಶ್ವರಿ ಅವರನ್ನು ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಹುದ್ದೆಗೆ ಪದೋನ್ನತಿ ಮೇರೆಗೆ ನಿಯೋಜಿಸಲಾಗಿದೆ.

ದೋಣಿ ದುರಂತ; ಒಂದೇ ಕುಟುಂಬದ 8 ಜನ ಜಲಸಮಾಧಿ

Related Articles

Back to top button