ಇಬ್ಬರ ಮಧ್ಯೆ ನಾನೇಕೆ ಬರಲಿ, ನನಗೆ ನೇರವಾಗಿ ಬರುವ ಸಾಮರ್ಥ್ಯ ಇದೆ – ಎಂ.ಬಿ.ಪಾಟೀಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ನಾವು ಬಯಸಿದರೆ ಸಿಎಂ ಆಗಲ್ಲ, ಸಮಾಜ , ಪಕ್ಷ, ಶಾಸಕರು, ಹೈಕಮಾಂಡ್ ಬಯಸಿದರೆ ಸಿಎಂ ಆಗಬಹುದು ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಬಿ.ಪಾಟೀಲ್ ಮುಖ್ಯಮಂತ್ರಿ ಆಕಾಂಕ್ಷಿನಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಬ್ಬರ ಮಧ್ಯೆ ನಾನೇಕೆ ಬರಲಿ. ನನಗೆ ನೇರವಾಗಿ ಬರುವ ಸಾಮರ್ಥ್ಯ ಇದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರಗೆ ಟಾಂಗ್ ನೀಡಿದರು.
ಲಿಂಗಾಯತ, ದಲಿತ, ನಾಯಕ, ಒಕ್ಕಲಿಗ ಸಮಾಜದವರು ಸಿಎಂ ಆಗಬೇಕೆಂದು ಬಯಸುತ್ತಾರೆ. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಯಾರು ಆಗಬೇಕು ಅನ್ನೋದನ್ನು ಹೈಕಮಾಂಡ ನಿರ್ಧಾರ ಮಾಡುತ್ತದೆ. ಚುನಾವಣೆ ಬಳಿಕ ಗೆದ್ದು ಬಂದ ಶಾಸಕರು, ಆ ನಂತರ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಯಾವುದೇ ಕಿತ್ತಾಟ ಇಲ್ಲ. ಈ ಕೆಟ್ಟ ಬಿಜೆಪಿ ಸರ್ಕಾರ ತೊಲಗಬೇಕು. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ರಾಹುಲ್ ಗಾಂಧಿಯವರು 140 ಸೀಟ್ ಟಾರ್ಗೆಟ್ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಇತಿಹಾಸವನ್ನ ತಿರುಚುವ ಕೆಲಸ ಮಾಡುತ್ತಿದೆ. ಪೊಲೀಸ್ ನೇಮಕಾತಿಯಲ್ಲಿ ಅಕ್ರಮ, ಸಂತೋಷ ಪಾಟೀಲ್ ಕೇಸನಲ್ಲಿ ಈಶ್ವರಪ್ಪಗೆ ಕ್ಲೀನ್ ಚೀಟ್ ನೀಡಲಾಗಿದೆ. ದೇಶದ ಜನರು ಈಗ ಮೋದಿಯವರ ಅಚ್ಛೆ ದಿನ್ ಬೇಡಾ ಅಂತಿದ್ದಾರೆ. ಡಾ.ಮನಮೋಹನ್ ಸಿಂಗ್ ಕಾಲದಲ್ಲಿ ಅತ್ಯಂತ ಪ್ರಭಲ ಆರ್ಥಿಕ ಸ್ಥಿತಿ ಇತ್ತು. ಆದರೆ ಈಗ ಅಧೋಗತಿಗೆ ಹೋಗಿದೆ. ಅದಾನಿ, ಅಂಬಾನಿ ಇಬ್ಬರೂ ಮೇಲೆ ಹೋಗುತ್ತಿದ್ದಾರೆ. ಭಾರತ ಶ್ರೀಲಂಕಾ ದೇಶದಂತೆ ಆಗಬಾರದು ಎಂದು ಕಿಡಿಕಾರಿದರು.
ಪ್ರಧಾನಮಂತ್ರಿ ಮೋದಿ ತನಿಖೆ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಮೂಲಕ ವಿಪಕ್ಷದವರಿಗೆ ತೊಂದರೆ ಕೊಡುತ್ತಿದ್ದಾರೆ. ನಿನ್ನೆ ದೇಶಾದ್ಯಂತ ಪ್ರತಿಭಟನೆ ಮಾಡಿದ್ದೇವೆ. ಇಂದು ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ನೆಹರು, ಗಾಂಧಿ ಕುಟುಂಬಕ್ಕೆ ಭವ್ಯವಾದ ಇತಿಹಾಸವಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಬಹಳಷ್ಟು ತ್ಯಾಗ ಮಾಡಿದ ಕುಟುಂಬ. ನ್ಯಾಷನಲ್ ಹೆರಾಲ್ಡ್ ಸ್ವಾತಂತ್ರ್ಯ ಪೂರ್ವದಿಂದಲೂ ಇದೆ. ಸ್ವಾತಂತ್ರ್ಯಕ್ಕಾಗಿ ಆ ಪತ್ರಿಕೆಯನ್ನ ಆರಂಭಿಸಲಾಯಿತು. ಈ ಪತ್ರಿಕೆ ಮೂಲಕ ದೇಶದ ಜನರಿಗೆ ಸಂದೇಶ ನೀಡಲಾಗುತ್ತಿತ್ತು. ಆ ಬಳಿಕ ಪತ್ರಿಕೆ ಆರ್ಥಿಕ ಸಂಕಷ್ಟ ಎದುರಿಸಿತು. ಆಗ ಕಾಂಗ್ರೆಸ್ ಪಕ್ಷದಿಂದ 90 ಕೋಟಿ ರುಪಾಯಿ ಹಣವನ್ನು ಪತ್ರಿಕೆ ಸಿಬ್ಬಂದಿ ಸೇರಿ ಬೇರೆ ಖರ್ಚುಗಳಿಗೆ ಬಳಸಲಾಗಿದೆ. ಆದರೆ ಒಂದೇ ಒಂದು ಎಫ್.ಐ.ಆರ್ ಇಲ್ಲ ಎಂದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿಯವರು ಸರ್ವಾಧಿಕಾರದ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮೇಲೆ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದಲ್ಲಿ ಗುತ್ತಿಗೆದಾರರ ಸಂಘದವರೇ ಪ್ರಧಾನಿಗೆ ಪತ್ರ ಬರೆದ್ದರು. ಸರ್ಕಾರದ ಸಚಿವರು 40 ಪರ್ಸೆಂಟ್ ಕಮೀಷನ್ ಪಡೆಯುತ್ತಿರುವ ವಿಚಾರ ತಿಳಿಸಿದ್ದಾರೆ. ಹಾಗಾದರೆ ಯಾಕೆ ಆ ಸಚಿವರ ಮೇಲೆ ಐಟಿ,ಇಡಿ,ಸಿಬಿಐ ರೆಡ್ ಆಗಿಲ್ಲ ಎಂದು ಕಿಡಿ ಕಾರಿದರು.
ಬಿಜೆಪಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನ ನಿರ್ನಾಮ ಮಾಡಲು ಯತ್ನಿಸುತ್ತಿದೆ. ಇದಕ್ಕೆ ನಾವು ಹೆದರುವುದಿಲ್ಲ. ಬಿಜೆಪಿ ದ್ವೇಷದ ರಾಜಕಾರಣವನ್ನ್ ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪ್ರಧಾನಿ ಮೋದಿ ಒಳ್ಳೆಯ ದಿನ ತರುತ್ತೇವೆ ಅಂದರು. ಉದ್ಯೋಗ ಕೊಡುತ್ತೇವೆ ಎಂದರು, ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟುತ್ತಿದೆ. ಈಗ ನೋಡಿದರೆ ಜಿಎಸ್ ಟಿ ಹಾಕಿದ್ದಾರೆ. ಅಕ್ಕಿ, ಗೋಧಿ, ಹಾಲು ಯಾವುದನ್ನೂ ಬಿಟ್ಟಿಲ್ಲ. ಸತ್ತರೂ ಜಿಎಸ್ ಟಿ ಕೊಟ್ಟು ಹೋಗಬೇಕು. ಜನರು ಬದುಕುಬಾರದು, ಸಾಯಲು ಬಾರದು ಎಂದು ಮಾಡಿದ್ದಾರೆ ಎಂದರು.
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿಚಾರಣೆ ಖಂಡಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿ ಕಾಂಗ್ರೆಸ್ ಭವನದಿಂದ ಡಿಸಿ ಕಚೇರಿವರೆಗೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು. ಈ ವೇಳೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ವಿನಯ್ ಕುಲಕರ್ಣಿ, ಆರ್.ಬಿ ತಿಮ್ಮಾಪುರ, ಶಾಸಕಿ ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕ ಫಿರೋಜ್ ಸೇಠ್, ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳಕರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಅಂತರ್ಜಾಲದಲ್ಲಿ ರಣಬೀರ್ ಸಿಂಗ್ ಬೆತ್ತಲೆ ಪೋಸ್ ಮಾಯಾಜಾಲ !
https://pragati.taskdun.com/politics-2/corona-to-sonia-gandhi-bjps-irony/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ