Kannada NewsKarnataka NewsLatest

ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಕೊಚ್ಚಿಹೋದ 7 ವರ್ಷದ ಬಾಲಕ

 ಪ್ರಗತಿವಾಹಿನಿ ಸುದ್ದಿ, ಮುಗಳಖೋಡ:ಟ್ಟಣದ ದಕ್ಷಿಣ ಭಾಗದಲ್ಲಿ ಹರಿಯುವ ಘಟಪ್ರಭಾ ಎಡದಂಡೆಯ ಜಮಖಂಡಿ ವಿಭಾಗ ನಾಲೆಯಲ್ಲಿ ಬಸವರಾಜ ಲಕ್ಷ್ಮಣ ಗೌಲತ್ತಿನವರ  ಎಂಬ ಬಾಲಕ ಕೊಚ್ಚಿಹೋಗಿದ್ದಾನೆ.

ಶುಕ್ರವಾರ ಮಧ್ಯಾಹ್ನ ೧೨ ಗಂಟೆ ವೇಳೆಗೆ ಗೆಳೆಯರೊಂದಿಗೆ ಈಜಲು ಈ ಬಾಲಕ ಲಮಾಣಿ ತಾಂಡಾ ಹತ್ತಿರ ಕಾಲುವೆಗೆ ಹೋಗಿದ್ದ. ಕಾಲುವೆಗೆ ಇತ್ತೀಚೆಗೆ ಹೊಸದಾಗಿ ಕಾಂಕ್ರೀಟ್ ಕಾಮಗಾರಿಯಾಗಿದ್ದು, ನೀರಿನ ರಭಸಕ್ಕೆ ಸಿಲುಕಿ ಬಾಲಕ ಕೊಚ್ಚಿ ಹೋಗಿದ್ದಾನೆ.

Home add -Advt

ಸ್ಥಳೀಯರು ಹಾಗೂ ಪೋಷಕರಿಂದ ನಾಲೆಯಲ್ಲಿ ಬಾಲಕನನ್ನು ಹುಡುಕುವ ಕಾರ್ಯಾಚರಣೆ ನಡೆದಿದೆ. ಸುಲ್ತಾನಪೂರ ಮತ್ತು ಚಿಮ್ಮಡ ನಾಲೆಯ ಗೇಟ್ (ಕವಾಟ) ಗಳಿಗೆ ಬಲೆ ಹಾಕಲಾಗಿದ್ದು,   ಬಾಲಕನ ದೇಹ ಪತ್ತೆಯಾಗಿಲ್ಲ. ಬಾಲಕನ ತಂದೆ-ತಾಯಿ ಆಕ್ರಂದನ ಮುಗಿಲು ಮುಟ್ಟಿದೆ.

Related Articles

Back to top button