Kannada NewsKarnataka NewsLatest

*ವರ್ಗಾವಣೆ ಮಾಡಿದ್ದಕ್ಕೆ ಹೈಡ್ರಾಮಾ ಮಾಡಿದ್ದ ನರ್ಸ್ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ವರ್ಗಾವಣೆ ಮಾಡಿದ್ದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎದುರು ಹೈಡ್ರಾಮಾ ಮಾಡಿದ್ದ ನರ್ಸ್ ಒಬ್ಬರನ್ನು ಸಸ್ಪೆಂಡ್ ಮಾಡಿರುವ ಘಟನೆ ನಡೆದಿದೆ.

ಸುನೀತಾ ನಾಯಕ್ ಸಸ್ಪೆಂಡ್ ಆದ ನರ್ಸ್. ಗದಗ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶೂಷಾಧಿಕಾರಿಯಾಗಿರುವ ಸುನೀತಾ, ವರ್ಗಾವಣೆಗೊಂಡಿದ್ದಕ್ಕೆ ಸಚಿವ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ಹೈಡ್ರಾಮಾ ಮಾಡಿದ್ದರು.

Home add -Advt

ಸಚಿವರು ಜನವರಿ 6ರಂದು ಧಾರವಾಡಕ್ಕೆ ಬಂದಿದ್ದ ವೇಳೆ ಸುನೀತಾ ಸಚಿವರನ್ನು ಭೇಟಿಯಾಗಿ ವರ್ಗಾವಣೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹೈಡ್ರಾಮಾ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದುರ್ವರ್ತನೆ ತೋರಿದ್ದ ಕಾರಣಕ್ಕೆ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.


Related Articles

Back to top button