Kannada NewsKarnataka NewsLatest

ಮತ್ತೆ ನಾಯಿ ಹುಡುಕಿಕೊಂಡು ಮನೆ ಬಾಗಿಲಿಗೆ ಬಂದ ಚಿರತೆ: ಭಯಾನಕ ದೃಶ್ಯ ಸೆರೆ

*ನಾಯಿಗಾಗಿ‌‌ ಕಾದು ಕಾದು ವಾಪಸ್ ಆದ‌ ಚಿರತೆ*

ಪ್ರಗತಿವಾಹಿನಿ ಸುದ್ದಿ, ಶಿರಸಿ: ‌ಕೆಲ‌‌ ದಿನಗಳ ಹಿಂದೆ ಚಿರತೆಯೊಂದು ಒಂದು ಬಾರಿ ನಾಯಿಯನ್ನು ಎತ್ತುಕೊಂಡು‌ ಹೋಗಿ, ಇನ್ನೊಂದು ಬಾರಿ‌‌ ನಾಯಿಗಾಗಿ‌ ಕಾದು ಏನೂ ಸಿಗದೇ ನಿರಾಸೆಯಿಂದ ಮರಳಿದೆ.. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಲ್ಲಿನಮನೆಯಲ್ಲಿ ನಡೆದಿದ್ದು ಈ ದೃಶ್ಯ ‌ಸಿಸಿಟಿವಿಯಲ್ಲಿ ಸೆರೆಯಾಗಿದೆ.

Home add -Advt

ಶಿರಸಿಯ ಹುಲೇಕಲ್ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ತಲ್ಲಿನಮನೆಯ ರಾಮಕೃಷ್ಣ ‌ಹೆಗಡೆ ಎಂಬುವರ ಮನೆಗೆ ಚಿರತೆ ಬಂದು ಮನೆಯ ಬಾಗಿಲಿನಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಿದೆ. ಇದಾದ ಕೆಲ ದಿನಗಳ ಬಳಿಕ ಪುನಃ ಚಿರತೆ ನಾಯಿ ಹುಡುಕಿಕೊಂಡು ಮನೆಯ ಬಳಿ ವಾಪಸ್ ಬಂದಿದೆ. ‌

ಆದರೆ ನಾಯಿ ಸಿಗದ ಕಾರಣ ಚಿರತೆ ಮನೆ ಬಾಗಿಲಿನಲ್ಲಿ ಅತ್ತಿತ್ತ ಹುಡುಕಾಟ ನಡೆಸಿದ್ದು, ನಿರಾಸೆಯಾಗಿದೆ. ಇದೆಲ್ಲವೂ ಸಹ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚು ಮಾಡಿದೆ. ಅಲ್ಲದೇ ಅದೇ ದಾರಿಯಲ್ಲಿ ಶಾಲಾ ಮಕ್ಕಳು ಓಡಾಡುತ್ತಿದ್ದು, ಕಾರಣ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related Articles

Back to top button